ಬಂಟ್ವಾಳ: ಜೂ.16ರವರೆಗೆ ನಿಷೇಧಾಜ್ಞೆ ಮುಂದುವರಿಕೆ
Update: 2017-06-09 21:21 IST
ಬಂಟ್ವಾಳ, ಜೂ. 9: ತಾಲೂಕಿನಾದ್ಯಂತ ಸೆಕ್ಷನ್ 144 ಅನ್ವವ ಜಾರಿಯಲ್ಲಿರುವ ನಿಷೇದಾಜ್ಞೆಯನ್ನು ಜೂ.16ವರೆಗೆ ವಿಸ್ತರಿಸಿ ತಹಶೀಲ್ದಾರ್ ಪುರಂದರ ಹೆಗ್ಡೆ ಆದೇಶ ಹೊರಡಿಸಿದ್ದಾರೆ.
ಕಲ್ಲಡ್ಕದಲ್ಲಿ ಮೇ 26ರಂದು ಮಸೀದಿಯಿಂದ ಮನೆಗೆ ತೆರಳುತ್ತಿದ್ದ ಯುಕರಿಬ್ಬರಿಗೆ ದುಷ್ಕರ್ಮಿಗಳ ತಂಡವೊಂದು ಚೂರಿ ಇರಿದ ಘಟನೆಯ ಬಳಿಕ ತಾಲೂಕಿನಾದ್ಯಂತ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದರಿಂದ ಮೇ 27ರಂದು ನಿಷೇದಾಜ್ಞೆ ಜಾರಿಗೊಳಿಸಲಾಗಿತ್ತು.
ಮೇ 27ರಿಂದ ಜೂನ್ 2ರವರೆಗೆ ಜಾರಿಯಲ್ಲಿದ್ದ ನಿಷೇದಾಜ್ಞೆಯನ್ನು ಜೂನ್ 9ರ ಮಧ್ಯರಾತ್ರಿವರೆಗೆ ನಿಷೇಧಾಜ್ಞೆ ವಿಸ್ತರಿಸಲಾಗಿತ್ತು. ಇದೀಗ ತಾಲೂಕಿನಾದ್ಯಂತ ಶಾಂತಿ ನೆಲೆಸಿದೆಯಾದರೂ ಮುಂಜಾಗೃತಾ ಕ್ರಮವಾಗಿ ಜೂನ್ 16ರ ಮಧ್ಯರಾತ್ರಿಯವರೆಗೆ ನಿಷೇಧಾಜ್ಞೆ ಮುಂದುವರಿಸಲಾಗಿದೆ ಎಂದು ತಹಶೀಲ್ದಾರ್ ಪುರಂದರ ಹೆಗ್ಡೆ ತಿಳಿಸಿದ್ದಾರೆ.