ದನ ಕಳವು: ದೂರು
Update: 2017-06-09 21:50 IST
ಮೂಡುಬಿದಿರೆ, ಜೂ.9: ಇಲ್ಲಿನ ಕಡಲಕೆರೆ ಬಳಿಯ ನಿವಾಸಿ ದಿನೇಶ್ ನಾಯಕ್ ಎಂಬವರ ಮನೆಯ ಹಟ್ಟಿಯಿಂದ ದನ ಕಳವಾದ ಬಗ್ಗೆ ದೂರು ದಾಖಲಾಗಿದೆ.
ಸುಮಾರು 30 ಸಾವಿರ ರೂ. ಮೌಲ್ಯದ ಜೆರ್ಸಿ ದನವನ್ನು ಕಳವುಗೈಯಲಾಗಿದೆ. ಈ ಕುರಿತು ಮೂಡುಬಿದಿರೆ ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.