ಜರ್ಮನಿ, ಇಂಡೋನೇಶ್ಯಾಕ್ಕೆ ನಿಟ್ಟೆ ವಿದ್ಯಾರ್ಥಿಗಳು

Update: 2017-06-09 18:20 GMT

ನಿಟ್ಟೆ, ಜೂ.9: ಇಂದಿನ ಜಾಗತೀಕರಣವನ್ನು ಗಮನಿಸುವಾಗ ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಮಟ್ಟದ ಮಾನ್ಯತೆ ದೊರೆಯಬೇಕೆಂಬುದು ಸದಭಿಲಾಷೆ. ಈ ನಿಟ್ಟಿನಲ್ಲಿ ನಿಟ್ಟೆ ಎನ್‌ಎಂಎಎಂ ತಾಂತ್ರಿಕ ಮಹಾವಿದ್ಯಾಲಯವು ಹಲವಾರು ಯೋಜನೆಗಳನ್ನು ಕೈಗೆತ್ತಿಕೊಂಡಿದೆ.

ಆ ಪ್ರಯುಕ್ತ ಮೆಕ್ಯಾನಿಕಲ್ ವಿಭಾಗದ ಅಂತಿಮ ವರ್ಷದ ಗ್ಲಾನ್ ವೆಸ್ಟನ್ ಕ್ರಾಸ್ಟೋ ಮತ್ತು ಜಾನ್‌ಸ್ಟನ್ ಅರನ್ಹ್ ಎಂಬ ಇಬ್ಬರು ವಿದ್ಯಾರ್ಥಿಗಳು ಜರ್ಮನಿಯ ಆರ್.ಡಬ್ಲೂ.ಟಿ.ಎಚ್ ಆಚೆನ್ ವಿಶ್ವವಿದ್ಯಾಲಯದ ವತಿಯಿಂದ ಜೂನ್ 12ರಿಂದ 23ರವರೆಗೆ ಹಮ್ಮಿಕೊಳ್ಳಲಾಗಿರುವ ಸಿಸ್ಟಮ್ಯಾಟಿಕ್ ಪ್ರೊಡಕ್ಟ್ ಇನ್ನೋವೇಶನ್ ಬೇಸಿಗೆ ತರಗತಿಗಳಿಗೆ ಹಾಜರಾಗಲು ಆಯ್ಕೆಯಾಗಿದ್ದಾರೆ.

ಎರಡನೆ ಹಂತದಲ್ಲಿ ಇದೇ ವಿದ್ಯಾರ್ಥಿಗಳು ಜುಲೈ 2ರಿಂದ 15ರವರೆಗೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬಂಡುಂಗ್ ಇಂಡೋನೇಶ್ಯಾದಲ್ಲಿ ‘ಸ್ಕಿಲ್ಸ್ ಆಂಡ್ ನಾಲೇಜ್ ಟು ಡಿಸೈನ್ ಟುಮೋರೋಸ್ ವೆಹಿಕಲ್’ ಎಂಬ ವಿಷಯದ ಬಗೆಗೆ ನಡೆಯುವ ಗ್ರೀನ್‌ಡ್ರೈವ್ ಬೇಸಿಗೆ ತರಗತಿಯಲ್ಲಿ ಭಾಗವಹಿಸಲಿರುವರು. ಗ್ರೀನ್‌ಡ್ರೈವ್ ಎಂಬುದು ಆನ್ಟ್ವರ್ಫ್ ವಿಶ್ವವಿದ್ಯಾಲಯದ ಉಪಕ್ರಮವಾಗಿದೆ.

ಗ್ರೀನ್‌ಡ್ರೈವ್ ವಿಚಾರವಾಗಿ ಬೆಲ್ಜಿಯಮ್ ಆನ್ಟ್ವರ್ಫ್ ವಿಶ್ವವಿದ್ಯಾಲಯ ಹಾಗೂ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಪ್ಳೂಣ್ಕರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News