ಅತ್ಯಧಿಕ ಸಂಶೋಧನ ಲೇಖನ ಪ್ರಕಟ

Update: 2017-06-09 18:23 GMT

ಮಂಗಳೂರು, ಜೂ.9: ವರ್ಷವೊಂದ ರಲ್ಲಿ ಅತ್ಯಧಿಕ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ ವಿಶ್ವದ 12,000 ಉದ್ಯಮಿ ಲೇಖಕರಲ್ಲಿ ಶ್ರೀನಿವಾಸ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್, ಮಂಗಳೂರು ಇದರ ನಿರ್ದೇಶಕ ಡಾ. ಪಿ.ಎಸ್. ಐತಾಳ್ ಪ್ರಥಮ ಸ್ಥಾನ ಪಡೆಯುವ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದಾರೆ. ಅಮೆರಿಕ ಮೂಲದ ಎಸ್‌ಎಸ್‌ಆರ್‌ಎನ್ ಸಂಸ್ಥೆ ತನ್ನ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಡಾ. ಐತಾಳ್ ಪ್ರಥಮ ಸ್ಥಾನ ಪಡೆದಿದ್ದಾರೆ.

 ವಿಶ್ವದಾದ್ಯಂತದ 3,45,600 ಲೇಖಕರ ಸಹಯೋಗದೊಂದಿಗೆ 1994ರಲ್ಲಿ ಎಸ್‌ಎಸ್‌ಆರ್‌ಎನ್ ಸಂಸ್ಥೆ ಸ್ಥಾಪನೆಯಾಗಿದೆ. ಕಳೆದ ವರ್ಷ ಡಾ. ಐತಾಳ್ 121 ಸಂಶೋಧನಾ ಲೇಖನಗಳನ್ನು ವಿವಿಧ ಅಂತರಾಷ್ಟ್ರೀಯ ನಿಯತಕಾಲಿಕಗಳಲ್ಲಿ ಪ್ರಕಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News