ಸುಳ್ಯ ಎಪಿಎಂಸಿಗೆ ಅಧ್ಯಕ್ಷ ದೇರಣ್ಣ ಗೌಡ, ಉಪಾಧ್ಯಕ್ಷೆ ಸುಕನ್ಯಾ ಭಟ್

Update: 2017-06-09 18:24 GMT

ಸುಳ್ಯ, ಜೂ.9: ಸುಳ್ಯ ಕೃಷಿ ಉತ್ಪನ್ನ ಮಾರು ಕಟ್ಟೆ ಸಮಿತಿಯ ನೂತನ ಅಧ್ಯಕ್ಷ ರಾಗಿ ದೇರಣ್ಣ ಗೌಡ ಅಡ್ಡಂತ್ತಡ್ಕ ಮತ್ತು ಉಪಾ ಧ್ಯಕ್ಷರಾಗಿ ಸುಕನ್ಯಾ ಕೆ. ಭಟ್ ಆಯ್ಕೆ ಯಾಗಿದ್ದಾರೆ. ಶುಕ್ರವಾರ ನಡೆದ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆಯಲ್ಲಿ ಇವರು ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ. ಎಪ್ರಿಲ್‌ನಲ್ಲಿ ನಡೆದ ಸುಳ್ಯ ಎಪಿಎಂಸಿ ಚುನಾವಣೆಯಲ್ಲಿ 13 ಸ್ಥಾನಗಳ ಪೈಕಿ 12ರಲ್ಲಿ ಬಿಜೆಪಿ ಬೆಂಬಲಿತರು ಮತ್ತು ಒಬ್ಬ ಸ್ವತಂತ್ರ ಅಭ್ಯರ್ಥಿ ಜಯ ಗಳಿಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ದೇರಣ್ಣ ಗೌಡ ಅಡ್ಡಂತ್ತಡ್ಕ ಅವರ ಹೆಸರನ್ನು ಸದಸ್ಯರಾದ ಜಯಪ್ರಕಾಶ್ ಕುಂಚಡ್ಕ ಸೂಚಿಸಿ ಮೋನಪ್ಪ ಗೌಡ ಅನುಮೋದಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಸುಕನ್ಯ ಭಟ್ ಅವರನ್ನು ವಿನಯಕುಮಾರ್ ಮುಳುಗಾಡು ಸೂಚಿಸಿ ಸಂತೋಷ್ ಜಾಕೆ ಅನುಮೋದಿಸಿದರು. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಒಂದೊಂದೇ ನಾಮಪತ್ರ ಸಲ್ಲಿಕೆಯಾಗಿದ್ದ ಕಾರಣ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿದ್ದ ತಹಶೀಲ್ದಾರ್ ಎಂ.ಎಂ. ಗಣೇಶ್ ಘೋಷಿಸಿದರು.

ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಎಪಿಎಂಸಿ ಸದಸ್ಯ ಜಯಪ್ರಕಾಶ್ ಕುಂಚಡ್ಕ, ಪ್ರಮುಖರಾದ ವೆಂಕಟ್ ದಂಬೆಕೋಡಿ, ಎ.ವಿ. ತೀರ್ಥರಾಮ, ಚಂದ್ರಾಕೋಲ್ಚಾರ್ ಶುಭ ಹಾರೈಸಿದರು. ಎಪಿಎಂಸಿ ಕಾರ್ಯದರ್ಶಿ ವಿಮಲಾ ವಂದಿಸಿದರು.

ತಾಪಂ ಅಧ್ಯಕ್ಷ ಚನಿಯ ಕಲ್ತಡ್ಕ, ಜಿಪಂ ಸದಸ್ಯರಾದ ಹರೀಶ್ ಕಂಜಿಪಿಲಿ, ಪುಷ್ಪಾವತಿ ಬಾಳಿಲ, ತಾಪಂ ಉಪಾಧ್ಯಕ್ಷೆ ಶುಭದಾ ಎಸ್.ರೈ, ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಪ್ರಮುಖರಾದ ಪ್ರಕಾಶ್ ಹೆಗ್ಡೆ, ಉಮೇಶ್ ವಾಗ್ಲೆ, ವಿನಯಕುಮಾರ್ ಕಂದಡ್ಕ, ಸುರೇಶ್ ಕಣೆಮರಡ್ಕ, ಬಾಲಚಂದ್ರ ಡಿ.ಸಿ., ಜಯರಾಮ ರೈ, ಹರೀಶ್ ಮೂರ್ಜೆ, ಶಿವಪ್ರಸಾದ್ ಉಗ್ರಾಣಿಮನೆ, ಭಾಗೀರಥಿ ಮುರುಳ್ಯ, ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News