×
Ad

ಎಂಡೋಸಲ್ಫಾನ್ ಸಂತ್ರಸ್ತ ಯುವಕ ಮೃತ್ಯು

Update: 2017-06-10 18:34 IST

ಕಾಸರಗೋಡು, ಜೂ.10: ಎಂಡೋಸಲ್ಫಾನ್ ಸಂತ್ರಸ್ತ ಯುವಕನೋರ್ವ ಮೃತಪಟ್ಟ ಘಟನೆ ಪೆರ್ಲದಲ್ಲಿ ನಡೆದಿದೆ.

ಬೆದ್ರಂಪಳ್ಳ ಶೇಣಿಯ ವಾಸುದೇವ ನಾಯಕ್ ಎಂಬವರ ಪುತ್ರ  ಶ್ರೇಯಸ್ (18) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. 

ಹುಟ್ಟಿನಿಂದಲೇ  ಅಸೌಖ್ಯದಿಂದ ಬಳಲುತ್ತಿದ್ದು ಮಂಗಳೂರು, ಪರಿಯಾರಂ ವೈದ್ಯಕೀಯ ಕಾಲೇಜು ಮೊದಲಾದೆಡೆ ಚಿಕಿತ್ಸೆ ನೀಡಲಾಗಿತ್ತು.

ಎರಡು ದಿನಗಳ ಹಿಂದೆ ಗಂಭೀರ ಸ್ಥಿತಿಗೆ ತಲಪಿದ್ದ  ಶ್ರೇಯಸ್ ನನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು ಎಂದು ತಿಳಿದುಬಂದಿದೆ.

ಎಂಡೋಸಲ್ಫಾನ್ ಸಂತ್ರಸ್ತತ ಪಟ್ಟಿಯಲ್ಲಿ ಶ್ರೇಯಸ್ ಹೆಸರು ಸೇರ್ಪಡೆಗೊಂಡಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News