×
Ad

ರೈತರ ಮೇಲಿನ ಗೋಲಿಬಾರ್ ಖಂಡಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ರೈಲು ರೋಕೋ

Update: 2017-06-10 18:47 IST

ಉಡುಪಿ,ಜೂ.10: ಮಧ್ಯಪ್ರದೇಶಲ್ಲಿ ರೈತರ ಮೇಲೆ ನಡೆಸಿದ ಗೋಲಿಬಾರ್ ಖಂಡಿಸಿ ಹಾಗೂ ರಾಹುಲ್ ಗಾಂಧಿಯವರನ್ನು ಬಂಧಿಸಿದ ಕ್ರಮದ ವಿರುದ್ದ ಇಂದು ಉಡುಪಿಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ರೈಲು ರೋಕೋ ಯತ್ನ ನಡೆಸಿದರು.

ಉಡುಪಿಯ ಇಂದ್ರಾಳಿಯ ರೈಲ್ವೇ ಸ್ಟೇಶನ್ ನಲ್ಲಿ ಮಡಗಾಂವ್-ಮಂಗಳೂರು ರೈಲು ರೋಕೋಗೆ ಯತ್ನಿಸಿದ್ದು, ಪೊಲೀಸರು ಕಾರ್ಯಕರ್ತರನ್ನು ತಡೆದರು. ಈ ಸಂದರ್ಭದಲ್ಲಿ ಮಾತನಾಡಿದ ಯುವ ಕಾಂಗ್ರೆಸ್‌ನ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಹೆಜಮಾಡಿ, ರೈತರ ಮೇಲಿನ ಗೋಲಿಬಾರ್ ನಡೆಸಿರುವುದನ್ನು ಖಂಡಿಸಿದ್ದಲ್ಲದೆ, ಮಧ್ಯಪ್ರದೇಶದ ಮುಖ್ಯಮಂತ್ರಿಯ ರಾಜೀನಾಮೆಗೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಮುಖಂಡರಾದ ವಿಶ್ವಾಸ್ ಅಮೀನ್, ವಿಘ್ನೇಶ್ ಕಿಣಿ, ಪ್ರಖ್ಯಾತ ಶೆಟ್ಟಿಯತೀಶ್ ಕರ್ಕೇರಾ, ಪ್ರಶಾಂತ್ ಜತ್ತನ್ನ, ಪ್ರಶಾಂತ್ ಪೂಜಾರಿ ಉಡುಪಿ, ಮುಹಮ್ಮದ್ ಶರೀಫ್ ಹೆಜಮಾಡಿ, ಇಮ್ರಾನ್ ಕಾಪು, ನಿಹಾಲ್ ಪಡುಬಿದ್ರೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News