×
Ad

ಕತರ್ ಮೇಲಿನ ನಿರ್ಬಂಧ ತೆರವಿಗೆ ಎರ್ದೊಗಾನ್ ಆಗ್ರಹ

Update: 2017-06-10 20:09 IST

ಇಸ್ತಾಂಬುಲ್, ಜೂ.10: ಕತರ್ ವಿರುದ್ಧ ಹೇರಲಾದ ನಿರ್ಬಂಧಗಳನ್ನು ತಕ್ಷಣ ತೆರವುಗೊಳಿಸಬೇಕೆಂದು ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗಾನ್ ಅರಬ್ ರಾಷ್ಟ್ರಗಳನ್ನು ಆಗ್ರಹಿಸಿದ್ದಾರೆ.

  ಈ ಹೋರಾಟದಲ್ಲಿ ಯಾರೂ ಗೆಲ್ಲಲಾರರು ಹಾಗೂ ಅಪನಿಂದೆಗಳಿಂದ ನಮಗೆ ಯಾವುದೇ ಪ್ರಯೋಜನವಾಗದೆಂದು ಗಲ್ಫ್ ರಾಷ್ಟ್ರಗಳ ನಾಯಕರು ಹಾಗೂ ಪೌರರಿಗೆ ಕರೆ ನೀಡುತ್ತೇನೆ ಎಂದು ಎರ್ದೊಗಾನ್ ಹೇಳಿದ್ದಾರೆ.

ಇಸ್ತಾಂಬುಲ್‌ನಲ್ಲಿ ಶನಿವಾರ ನಡೆದ ಇಫ್ತಾರ್‌ಕೂಟವನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು ಕತರ್ ವಿರುದ್ಧದ ಎಲ್ಲಾ ನಿರ್ಬಂಧಗಳನ್ನು ಸೌದಿ ಆರೇಬಿಯ ಕೊನೆಗೊಳಿಸಬೇಕು ಹಾಗೂ ಮಾತುಕತೆಯ ಮೂಲಕ ಪ್ರಸಕ್ತ ಬಿಕ್ಕಟ್ಟನ್ನು ಬಗೆಹರಿಸುವ ನಿರ್ಧಾರ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.

  ಕತರ್ ಭಯೋತ್ಪಾದನೆಯನ್ನು ಬೆಂಬಲಿಸುತ್ತಿದೆಯೆಂದು ಆರೋಪಿಸಿ, ಈ ವಾರದ ಆರಂಭದಲ್ಲಿ ಸೌದಿ ಆರೇಬಿಯ, ಬಹರೈನ್, ಯುಎಇ ಹಾಗೂ ಈಜಿಪ್ಟ್, ಆ ದೇಶದ ಜೊತೆ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಂಡಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News