ಅರಬ್ ರಾಜತಾಂತ್ರಿಕ ಬಿಕ್ಕಟ್ಟು ನಿವಾರಣೆಗೆ ಮರ್ಕೆಲ್ ಆಗ್ರಹ
Update: 2017-06-10 20:14 IST
ಮೆಕ್ಸಿಕನ್ ಸಿಟಿ,ಜೂ.10: ಅರಬ್ ರಾಷ್ಟ್ರಗಳಿಂದ ಕತರ್ ಮೇಲಿನ ನಿಷೇಧದ ಹಿನ್ನೆಲೆಯಲ್ಲಿ ಉದ್ಭವಿಸಿರುವ ಬಿಕ್ಕಟ್ಟನ್ನು ಕೊನೆಗೊಳಿಸಲು ಸಹಕರಿಸುವಂತೆ ಜರ್ಮನಿಯ ಚಾನ್ಸಲರ್ ಆ್ಯಂಜೆಲಾ ಮರ್ಕೆಲ್ ಅವರು ವಿಶ್ಸಮುದಾಯಕ್ಕೆ ಕರೆ ನೀಡಿದ್ದಾರೆ. ಈ ಪ್ರದೇಶದಲ್ಲಿ ತಲೆದೋರಿರುವ ಬಿಕ್ಕಟ್ಟನ್ನು ನಿವಾರಿಸಲು ಗಲ್ಫ್ ರಾಷ್ಟ್ರಗಳು, ಇರಾನ್, ಟರ್ಕಿ ತಕ್ಷಣವೇ ಕಾರ್ಯಪ್ರವೃತ್ತವಾಗಬೇಕೆಂದು ಅವರು ಆಗ್ರಹಿಸಿದ್ದ್ಜಾರೆ.