ಸಾಮೂಹಿಕ ಇಫ್ತಾರ್‌ಗಳಿಂದ ಸೌಹಾರ್ದತೆ ಸಾಧ್ಯ : ಅಹ್ಮದ್ ಶರೀಫ್
Update: 2017-06-10 21:22 IST
ಮಂಜೇಶ್ವರ, ಜೂ. 10: ಸಾಮೂಹಿಕ ಇಫ್ತಾರ್ ಗಳಿಂದ ಸಮಾಜದಲ್ಲಿ ಸೌಹಾರ್ದತೆಯನ್ನು ಕಾಯ್ದುಕೊಳ್ಳಲು ಸಾಧ್ಯ ಎಂದು ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಜಿಲ್ಲಾಧ್ಯಕ್ಷ ಕೆ.ಅಹ್ಮದ್ ಶರೀಫ್ ಹೇಳಿದ್ದಾರೆ.
ಅವರು ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಉಪ್ಪಳ ಘಟಕದ ವತಿಯಿಂದ ಆಯೋಜಿಸಿದ್ದ ಸಾಮೂಹಿಕ ಇಫ್ತಾರ್ ಸಂಗಮವನ್ನು ಉಪ್ಪಳದ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಸಭಾಂಗಣದಲ್ಲಿ ಉದ್ಗಾಟಿಸಿ ಮಾತನಾಡುತ್ತಿದ್ದರು.
ಸಂಗಮದಲ್ಲಿ ಮಂಜೇಶ್ವರ ಪ್ರೆಸ್ ಕ್ಲಬ್ ಅಧ್ಯಕ್ಷ ಆರಿಫ್ ಮಚ್ಚಂಪಾಡಿ, ಮಂಗಲ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಶಾಹುಲ್ ಹಮೀದ್ , ಸದಸ್ಯ ಮುಸ್ತಫಾ , ಸಿ.ಪಿ.ಎಂ ಮುಖಂಡ ರಮಣನ್ ಮಾಸ್ಟರ್ , ಯೂತ್ ವಿಂಗ್ ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ಜಬ್ಬಾರ್ ಉಪ್ಪಳ , ಪತ್ರಕರ್ತ ಸನಲ್ ಕುಮಾರ್ , ಯೂತ್ ವಿಂಗ್ ಉಪ್ಪಳ ಯುನಿಟ್ ಅಧ್ಯಕ್ಷ ರೈಶಾದ್ ಮೊದಲಾದವರು ಶುಭ ಹಾರೈಸಿದರು. ಉಪ್ಪಳ ಘಟಕದ ಅಧ್ಯಕ್ಷ ರಫೀಕ್ ಅಧ್ಯಕ್ಷತೆ ವಹಿಸಿದರು.