ಆಳ್ವಾಸ್‌ನಲ್ಲಿ ಶಿಕ್ಷಕ ಪುನಶ್ಚೇತನ ಕಾರ್ಯಾಗಾರ

Update: 2017-06-10 15:57 GMT

ಮೂಡಬಿದಿರೆ, ಜೂ. 10: ‘ಮೂಲ ಸಂಶೋಧನ ಕೌಶಲ್ಯಗಳ’ ಕುರಿತು ಆಳ್ವಾಸ್ ಪದವಿ ಕಾಲೇಜಿನ ಮಾನವಿಕ ವಿಭಾಗದ ಶಿಕ್ಷಕರಿಗಾಗಿ ಕುವೆಂಪು ಸಭಾಭವನದಲ್ಲಿ ನಡೆದ ಒಂದು ದಿನದ ಶಿಕ್ಷಕ ಪುನಶ್ಚೇತನ ಕಾರ್ಯಾಗಾರ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಸಂಶೋಧನೆ ಪ್ರತಿಯೊಂದು ಕ್ಷೇತ್ರಕ್ಕೂ ಅತ್ಯಗತ್ಯ. ವಿಜ್ಞಾನ ವಿಷಯಕ್ಕಷ್ಟೇ ಸಂಶೋಧನೆಯನ್ನು ನಿರ್ಬಂದಿಸದೇ, ಕಲಾ ಕ್ಷೇತ್ರದಲ್ಲಿನ ವಿಪುಲ ಅವಕಾಶಗಳಿಗೆ ನಮ್ಮನ್ನು ನಾವು ತೆರೆದಿಡುವ ತುರ್ತು ಕಾರ್ಯ ಆಗಬೇಕಾಗಿದೆ ಎಂದು ತಿಳಿಸಿದರು.

ಎಸ್‌ಡಿಎಂ ಸೆಂಟರ್ ಫಾರ್ ಇಂಟರ್‌ ಡಿಸೀಪ್ಲಿನರಿ ರಿಸರ್ಚ ಇನ್ ಹ್ಯುಮೇನಿಟಿಸ್ ಹಾಗೂ ಸೋಷಿಯಲ್ ಸೈನ್ಸಸ್‌ನ ನಿರ್ದೇಶಕ ಡಾ ಡಂಕಿನ್ ಜಲ್ಕಿ ಹಾಗೂ ಇಂಡಿಯಾ ಪ್ಲಾಟಪಾರ್ಮನ ಚೀಫ್ ಆಪರೇಟಿಂಗ್ ಆಫೀಸರ್ ಸಂದೀಪ್ ಶೆಟ್ಟಿ  ಸಂಪನ್ಮೂಲ ವ್ಯಕ್ತಿಗಳಾಗಿದ್ದರು.

ಪದವಿ ಮನಶಾಸ್ತ್ರ ವಿಭಾಗದ ಉಪನ್ಯಾಸಕಿ ಜೋಸ್ವಿಟಾ ಡೇಸಾ ಕಾರ್ಯಕ್ರಮ ನಿರ್ವಹಿಸಿ, ಸಮಾಜಕಾರ್ಯ ವಿಭಾಗದ ಮುಖ್ಯಸ್ಥೆ ಮದುಮಾಲ ಸ್ವಾಗತಿಸಿ, ಹಿಂದಿ ವಿಭಾಗದ ಮುಖ್ಯಸ್ಥ ಡಾ. ರಾಜೀವ್ ವಂದಿಸಿದರು.

ಕಾರ್ಯಕ್ರಮದಲ್ಲಿ ಆಳ್ವಾಸ ಪದವಿ ಕಾಲೇಜಿನ ಪ್ರಾಚಾರ್ಯ ಡಾ ಕುರಿಯನ್, ಮಾನವಿಕ ವಿಭಾಯದ ಡೀನ್ ಸಂಧ್ಯಾ ಕೆ ಎಸ್, ಉಪನ್ಯಾಸಕಿ ರೇಷ್ಮಾ ಉದಯ್ ಕುಮಾರ್ ಉಪಸ್ಥಿತರಿದ್ದರು.

ಮೂಲ ಸಂಶೋಧನ ಕೌಶಲ್ಯಗಳು, ಪ್ರಸ್ತುತ ಪಾಶ್ಚಿಮಾತ್ಯ ಹಾಗೂ ಭಾರತೀಯ ಮಾನವಿಕ ಸಂಶೋಧನೆಗಳ ಪ್ರವೃತ್ತಿ, ಪರಿಣಾಮಕಾರಿ ಸಂಶೋಧನೆಗೆ ಬೇಕಾಗುವ ಪರಿಕರಗಳ ಬಗ್ಗೆ ವಿಚಾರ ಮಂಡನೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News