×
Ad

ಎಲ್ಪೆಲ್ ಜಲಾಲಿಯಾ ಮದರಸಕ್ಕೆ ಬೆಂಕಿ : ಖಂಡನೆ

Update: 2017-06-10 21:59 IST

ಬಂಟ್ವಾಳ, ಜೂ. 10: ತಾಲೂಕಿನ ಕುಕ್ಕಿಪಾಡಿ ಗ್ರಾಮದ ಬದ್ರಿಯಾ ಜುಮಾ ಮಸೀದಿಯ ಆದೀನದಲ್ಲಿರುವ ಎಲ್ಪೆಲ್ ಜಲಾಲಿಯಾ ಮದರಸಕ್ಕೆ ಬೆಂಕಿ ಹಚ್ಚಿರುವ ಕಿಡಿಗೇಡಿಗಳ ಕೃತ್ಯವನ್ನು ಸುನ್ನೀ ಜಂ-ಇಯತ್ತುಲ್ ಮುಅಲ್ಲಿಮೀನ್ ಬಂಟ್ವಾಳ ರೇಂಜ್ ಅಧ್ಯಕ್ಷ ಮುಹಮ್ಮದ್ ರಫೀಕ್ ಸಹದಿ ಅಲ್ ಅಫ್ಲಲಿ, ಸುನ್ನೀ ಮೆನೇಜ್‌ಮೆಂಟ್ ಅಸೋಸಿಯೇಶನ್ ಬಂಟ್ವಾಳ ಅಧ್ಯಕ್ಷ ಹುಸೈನ್ ಪುಚ್ಚಮೊಗರು ತೀವ್ರವಾಗಿ ಖಂಡಿಸಿದ್ದು ಕೂಡಲೇ ಆರೋಪಿಗಳನ್ನು ಬಂಧಿಸುವಂತೆ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ.

--------------------------------------

ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ವಲಯ ಖಂಡನೆ

ಕುಕ್ಕಿಪಾಡಿ ಗ್ರಾಮದ ಎಲ್ಪೆಲ್ ಮದರಸಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ವಲಯ ತೀವ್ರವಾಗಿ ಖಂಡಿಸಿದೆ.

ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ವಲಯ ಅಧ್ಯಕ್ಷ ಇರ್ಷಾದ್ ದಾರಿಮಿ, ಉಪಾಧ್ಯಕ್ಷ ಅಲ್ತಾಫ್ ಮಿತ್ತಬೈಲ್, ಜೊತೆ ಕಾರ್ಯದರ್ಶಿ ಮುಸ್ತಫಾ ಕಟ್ಟದಪಡ್ಪು, ವಿಖಾಯ ಕನ್ವಿನರ್ ಶಾಕಿರ್ ಶಾಂತಿಅಂಗಡಿ, ಕೇಂದ್ರ ಸಮಿತಿ ಸದಸ್ಯ ಬಶೀರ್ ಮಜಲ್ ಶನಿವಾರ ಸ್ಥಳಕ್ಕೆ ಭೇಟಿ ನೀಡಿದ್ದು ಕಿಡಿಗೇಡಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಜರಗಿಸುವಂತೆ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡುವಂತೆ ಈ ಸಂದರ್ಭದಲ್ಲಿ ಸಚಿವ ಬಿ.ರಮಾನಾಥ ರೈರವರನ್ನು ಆಗ್ರಹಿಸಿದ್ದಾರೆ.

------------------------------

ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಖಂಡನೆ

ಕುಕ್ಕಿಪಾಡಿ ಗ್ರಾಮದ ಜಲಾಲಿಯಾ ಮದರಸಕ್ಕೆ ಬೆಂಕಿ ಹಚ್ಚಿರುವ ಕಿಡಿಗೇಡಿಗಳ ಕೃತ್ಯವನ್ನು ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಜಾಫರ್ ಸಾಧಿಕ್ ಫೈಝಿ ಖಂಡಿಸಿದ್ದು ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News