×
Ad

ಬಜರಂಗದಳ ಮುಖಂಡನಿಗೆ ಜೀವ ಬೆದರಿಕೆ: ದೂರು ದಾಖಲು

Update: 2017-06-10 22:24 IST

ಮೂಡುಬಿದಿರೆ, ಜೂ.10: ಮಂಗಳೂರಿನಲ್ಲಿ ಗೋಧ್ರಾ ಮಾದರಿ ಗಲಭೆ ನಡೆಸುವುದಾಗಿ ವಾಯ್ಸ್ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಪರಿಣಾಮ ವ್ಯಾಪಕ ಕೊಲೆ ಬೆದರಿಕೆ ಎದುರಿಸಬೇಕಾಗಿ ಬಂದ ಹಿನ್ನೆಲೆಯಲ್ಲಿ ಬಜರಂಗದಳ ಕಾರ್ಕಳ ತಾಲೂಕು ಸಂಚಾಲಕ ಮಹೇಶ್ ಶೆಣೈ ಮೂಡುಬಿದಿರೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕೋಮು ಪ್ರಚೋದನಕಾರಿಯಾಗಿದ್ದ ವಾಯ್ಸ್ ಕ್ಲಿಪ್ ಒಂದು ಮಹೇಶ್ ಬೈಲೂರು ಹೆಸರಿನಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ಮಂಗಳೂರಿನಲ್ಲಿ ಗೋಧ್ರಾ ಮಾದರಿ ಗಲಭೆ ನಡೆಸುವುದಾಗಿ ಮಹೇಶ್ ಹೇಳಿದ್ದಾನೆ ಎನ್ನುವ ಈ ವಾಯ್ಸ್ ಕ್ಲಿಪ್ ವಿರುದ್ಧ ಭಾರೀ ಆಕ್ರೋಶಗಳು ವ್ಯಕ್ತವಾಗಿತ್ತು. ನಂತರ ಇದೇ ವಿಚಾರದಲ್ಲಿ ಆತನಿಗೆ ಅನಾಮಧೇಯ ವ್ಯಕ್ತಿಗಳಿಂದ ಜೀವಬೆದರಿಕೆ ಕರೆಗಳು ಬಂದಿತ್ತು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News