×
Ad

ಪಡುಬಿದ್ರಿಯಲ್ಲಿ ಏರ್‌ಪೋರ್ಟ್ ನಿರ್ಮಾಣವಾದರೆ ಸ್ವಾಗತಾರ್ಹ: ಶಾಸಕ ವಿನಯಕುಮಾರ್ ಸೊರಕೆ

Update: 2017-06-10 22:57 IST

ಪಡುಬಿದ್ರೆ, ಜೂ. 10: ಪಡುಬಿದ್ರಿಯಲ್ಲಿ ಏರ್‌ಪೋರ್ಟ್ ನಿರ್ಮಾಣವಾದರೆ ಸ್ವಾಗತಾರ್ಹ ಎಂದು ಶಾಸಕ ವಿನಯಕುಮಾರ್ ಸೊರಕೆ ಹೇಳಿದರು.

 ಕಾಪುವಿನಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ಏರ್‌ಪೋರ್ಟ್ ನಿರ್ಮಾಣದ ಬಗ್ಗೆ ಹಲವು ವರ್ಷಗಳ ಹಿಂದೆಯೇ ಪ್ರಸ್ತಾವನೆ ಸಲ್ಲಿಸಲಾಗಿತ್ತು ಎಂದರು.

ಪಡುಬಿದ್ರೆಯಲ್ಲಿ ಏರ್‌ಪೋರ್ಟ್‌ಗಾಗಿ ಹಿಂದೆಯೇ ಸರ್ವೇ ಕಾರ್ಯ ನಡೆದಿತ್ತು. ಬೃಹತ್ ಯೋಜನೆಗಳು ಈ ಭಾಗಕ್ಕೆ ಬರುತ್ತಿದೆ. ಎರಡು ಜಿಲ್ಲೆಗೆ ಮಧ್ಯದಲ್ಲಿದೆ. ಆ ಹಿನ್ನಲೆಯಲ್ಲಿ ಬೃಹತ್ ಕೈಗಾರಿಕಾ ಸಚಿವ ಆರ್.ವಿ.ದೇಶಪಾಡೆ ವಿಧಾನ ಪರಿಷತ್‌ನಲ್ಲಿ ಹೇಳಿಕೆ ನೀಡಿದ್ದಾರೆ ಎಂದರು.

ಬಜ್ಪೆ ಏರ್‌ಪೋರ್ಟ್ ವಿಸ್ತರಣೆಗೆ ಭೂಮಿಯ ಕೊರತೆ ಇದ್ದು, ಹಿಂದೆ ಇಲ್ಲಿ ಅವಘಡವೂ ನಡೆದಿತ್ತು. ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗೆ ಏರ್‌ಪೋರ್ಟ್ ನಿರ್ಮಾಣದಿಂದ ಅನುಕೂಲವಾಗಲಿದೆ. ಸಾಕಷ್ಟು ಮಂದಿ ವಿದೇಶಕ್ಕೂ ಇಲ್ಲಿಂದ ಹೋಗುತ್ತಿದ್ದಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News