×
Ad

ಗೆದ್ದವರು ಸೆಮಿಗೆ ಸೋತವರು ಮನೆಗೆ : ಇಂದು ಭಾರತ - ದಕ್ಷಿಣ ಆಫ್ರಿಕ ಮುಖಾಮುಖಿ

Update: 2017-06-11 00:10 IST

ಲಂಡನ್, ಜೂ.10: ಹಾಲಿ ಚಾಂಪಿಯನ್ ಟೀಮ್ ಇಂಡಿಯಾ ರವಿವಾರ ಇಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯ ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕವನ್ನು ಭಾರತ ಎದುರಿಸಲಿದೆ.ತಂಡಗಳಿಗೂ ಇದು ಮಹತ್ವದ ಪಂದ್ಯವಾಗಿದೆ.

ಎರಡೂ ತಂಡಗಳಿಗೆ ಒಂದು ರೀತಿಯಲ್ಲಿ ಇದು ಕ್ವಾರ್ಟರ್ ಫೈನಲ್ ಆಗಿದೆ. ಈ ಪಂದ್ಯದಲ್ಲಿ ಜಯಿಸಿದ ತಂಡ ಸೆಮಿಫೈನಲ್‌ಗೇರಲಿದೆ.ಸೋತ ತಂಡ ಚಾಂಪಿಯನ್ಸ್ ಲೀಗ್‌ನಲ್ಲಿ ಅಭಿಯಾನ ಕೊನೆಗೊಳಿಸಿ ತವರಿಗೆ ಮರಳುವಂತಾಗಿದೆ.

 ಭಾರತದ ಬ್ಯಾಟಿಂಗ್ ಬಲಿಷ್ಟವಾಗಿದೆ. ಆದರೆ ಬೌಲಿಂಗ್ ದುರ್ಬಲವಾಗಿದೆ. ಇದರಿಂದಾಗಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭಾರತ ದೊಡ್ಡ ಮೊತ್ತದ ಸವಾಲು ಎದುರಿಸಿದ್ದರೂ, ದುರ್ಬಲ ಬೌಲಿಂಗ್ ಭಾರತದ ಗೆಲುವಿನ ಪ್ರಯತ್ನವನ್ನು ವಿಫಲಗೊಳಿಸಿತ್ತು.

ಲಂಕಾ ವಿರುದ್ಧ ಸೋಲು ಅನುಭವಿಸಿರುವ ಹಿನ್ನೆಲೆಯಲ್ಲಿ ಭಾರತ ಒತ್ತಡಕ್ಕೆ ಸಿಲುಕಿದೆ. ಇದೀಗ ನಂ.1 ತಂಡದ ಸವಾಲು ಭಾರತಕ್ಕೆ ಎದುರಾಗಿದೆ.

 ಭಾರತದ ಮಧ್ಯಮ ಸರದಿಯ ಬ್ಯಾಟಿಂಗ್ ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್ ಮತ್ತು ಎಂಎಸ್ ಧೋನಿ ಅವರನ್ನು ಅವಲಂಭಿಸಿದೆ. ರೋಹಿತ್ ಶರ್ಮ ಮತ್ತು ಶಿಖರ್ ಧವನ್ ಆರಂಭಿಕ ದಾಂಡಿಗರಾಗಿ ತಂಡಕ್ಕೆ ಉಪಯುಕ್ತ ಕೊಡುಗೆ ನೀಡುತ್ತಿದ್ದಾರೆ.

 ದಕ್ಷಿಣ ಆಫ್ರಿಕ ತಂಡ ಬಲಿಷ್ಟವಾಗಿದ್ದರೂ ನಿರ್ಣಾಯಕ ಹಂತದಲ್ಲಿ ಎಡವುತ್ತಿರುವುದು ತಂಡದ ದೊಡ್ಡ ದೌರ್ಬಲ್ಯ. ದಕ್ಷಿಣ ಆಫ್ರಿಕ ವಿಶ್ವಕಪ್‌ನಲ್ಲಿ ಏನನ್ನು ಸಾಧಿಸದಿದ್ದರೂ, ಚಾಂಪಿಯನ್ಸ್ ಟ್ರೋಫಿಯಲ್ಲಿ ಒಂದು ಬಾರಿ ಚಾಂಪಿಯನ್ ಆಗಿದೆ. ಇನ್ನೊಮ್ಮೆ ಚಾಂಪಿಯನ್ಸ್ ಟ್ರೋಫಿ ಜಯಸುವ ಪ್ರಯತ್ನದಲ್ಲಿದೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ ದಕ್ಷಿಣ ಆಫ್ರಿಕವು ಪಾಕಿಸ್ತಾನಕ್ಕೆ ಶರಣಾಗಿದೆ. ಶ್ರೀಲಂಕಾ ತಂಡಕ್ಕೆ ಭಾರತ ಶರಣಾಗಿದೆ. ಎರಡೂ ತಂಡಗಳು ಕಳೆದ ಪಂದ್ಯದಲ್ಲಿ ಸೋಲು ಅನುಭವಿಸಿದ್ದು ಮಾತ್ರವಲ್ಲದೆ ತಂಡದ ನಾಯಕರಾದ ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಸೊನ್ನೆ ಸುತ್ತಿದ್ದರು. ಕೊಹ್ಲಿ ಮೊದಲ ಬಾರಿ ಭಾರತದ ತಂಡವನ್ನು ಚಾಂಪಿಯನ್ಸ್ ಟ್ರೋಪಿಯಲ್ಲಿ ಮುನ್ನಡೆಸುತ್ತಿದ್ದಾರೆ. ಕೊಹ್ಲಿ ಈ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವುದನ್ನು ನಿರೀಕ್ಷಿಸಲಾಗಿದೆ.

ಎಬಿಡಿವಿಲಿಯರ್ಸ್ ಅವರಿಗೆ ಜಸ್‌ಪ್ರೀತ್ ಬುಮ್ರಾ ಸವಾಲು ಎದುರಾಗಿದೆ. ಕಳೆದ ಪಂದ್ಯದಲ್ಲಿ ಭಾರತದ ಯುವರಾಜ್ ಸಿಂಗ್ ವಿಫಲರಾಗಿದ್ದರು. ದಕ್ಷಿಣ ಆಫ್ರಿಕ ವಿರುದ್ಧದ ಪಂದ್ಯದಲ್ಲಿ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಇಲ್ಲ. ಇದೇ ವೇಳೆ ವೇಗದ ಬೌಲರ್ ಮುಹಮ್ಮದ್ ಶಮಿ ಮತ್ತು ಸ್ಪಿನ್ನರ್ ಸೇವೆಯನ್ನು ಕೊಹ್ಲಿ ಕಳೆದ ಎರಡು ಪಂದ್ಯಗಳಲ್ಲಿ ಬಳಸಿಕೊಂಡಿಲ್ಲ. ಆಫ್ರಿಕ ವಿರುದ್ಧ ಇವರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ.

ಭಾರತ:ವಿರಾಟ್ ಕೊಹ್ಲಿ(ನಾಯಕ), ಶಿಖರ್ ಧವನ್, ರೋಹಿತ್ ಶರ್ಮ, ಯುವರಾಜ್ ಸಿಂಗ್, ಮಹೇಂದ್ರ ಸಿಂಗ್ ಧೋನಿ(ವಿಕೆಟ್ ಕೀಪರ್), ಕೆದಾರ್ ಜಾಧವ್, ಹಾರ್ದಿಕ್ ಪಾಂಡ್ಯ, ರವೀಂದ ಜಡೇಜ, ಜಸ್ಪ್ರೀತ್ ಬುಮ್ರಾ, ಉಮೇಶ್ ಯಾದವ್, ಭುವನೇಶ್ವರ ಕುಮಾರ್, ಮುಹಮ್ಮದ್ ಶಮಿ, ರವಿಚಂದ್ರನ್ ಅಶ್ವಿನ್, ಅಜಿಂಕ್ಯ ರಹಾನೆ, ದಿನೇಶ್ ಕಾರ್ತಿಕ್.

ದಕ್ಷಿಣ ಆಫ್ರಿಕ: ಎಬಿ ಡಿವಿಲಿಯರ್ಸ್(ನಾಯಕ), ಹಾಶಿಮ್ ಅಮ್ಲ, ಫರ್ಹಾನ್ ಬೆಹಾರ್ದಿನ್, ಕ್ವಿಂಟನ್ ಡೆ ಕಾಕ್(ವಿಕೆಟ್ ಕೀಪರ್), ಜಿನ್ ಪಾಲ್ ಡುಮಿನಿ, ಎಫ್ ಡು ಪ್ಲೆಸಿಸ್, ಇಮ್ರಾನ್ ತಾಹಿರ್, ಕೇಶವ್ ಮಹಾರಾಜ್, ಡೇವಿಡ್ ಮಿಲ್ಲರ್, ಮೊರ್ನೆ ಮೊರ್ಕೆಲ್, ಕ್ರಿಸ್ ಮೊರಿಸ್, ವೇಯ್ನಿ ಪಾರ್ನೆಲ್, ಅಂಡ್ಲೆ ಫೆಹ್ಲುಕ್ವಾಯೊ, ಡ್ವೇಯ್ನಾ ಪ್ರಿಟೋರಿಯಸ್, ಕಾಗಿಸೊ ರಬಾಡ.

ಪಂದ್ಯದ ಸಮಯ: ಮಧ್ಯಾಹ್ನ 3:00ಗಂಟೆಗೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News