ಮಂಗಳೂರು ನಗರ ನೂತನ ಪೊಲೀಸ್ ಆಯುಕ್ತ ಅಧಿಕಾರ ಸ್ವೀಕಾರ
Update: 2017-06-12 19:12 IST
ಮಂಗಳೂರು, ಜೂ.12: ಮಂಗಳೂರು ನಗರದ ನೂತನ ಪೊಲೀಸ್ ಆಯುಕ್ತರಾಗಿ ಟಿ.ಆರ್.ಸುರೇಶ್ ಸೋಮವಾರ ಅಧಿಕಾರ ಸ್ವೀಕರಿಸಿದರು.
ಬಳಿಕ ಮಾತನಾಡಿದ ಅವರು, ಮಂಗಳೂರಿನಲ್ಲಿ ಸೇವೆ ಸಲ್ಲಿಸಲು ಇದೊಂದು ಉತ್ತಮ ಅವಕಾಶ ಎಂದು ಭಾವಿಸುತ್ತೇನೆ. ನನ್ನ ಶಕ್ತಿಮೀರಿ ನಗರದ ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಸಾರ್ವಜನಿಕರ ಆಸ್ತಿಪಾಸ್ತಿ ರಕ್ಷಿಸಲು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತೇನೆ. ಮಂಗಳೂರು ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯಲ್ಲಿ ಜನಸ್ನೇಹಿ ಪೊಲೀಸ್‌ಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.
ಮೂಲತ: ಶಿವಮೊಗ್ಗ ಜಿಲ್ಲೆಯ ತಿಮ್ಮಯ್ಯ ರಾಮಪ್ಪ ಸುರೇಶ್ 1991ರಲ್ಲಿ ಡಿವೈಎಸ್‌ಪಿಯಾಗಿ ಬಿಜಾಪುರದಲ್ಲಿ ಸೇವೆ ಆರಂಭಿಸಿ ದರು. ಆ ಬಳಿಕ ಬಾಗಲಕೋಟೆ, ಉತ್ತರ ಕನ್ನಡ, ಹುಬ್ಬಳ್ಳಿ-ಧಾರವಾಡ, ಮೈಸೂರು, ತುಮಕೂರು, ಬೆಳಗಾವಿ, ಕೊಡಗು, ಬಾಗಲಕೋಟೆ, ರಾಯಚೂರು, ಬೆಂಗಳೂರು ನಗರ ಉತ್ತರ, ಅಗ್ನಿಶಾಮಕ ದಳ ಹೀಗೆ ಸುಮಾರು 26 ವರ್ಷ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ.