ಶ್ರೀ ಸೋಮನಾಥ ದೇವಸ್ಥಾನದಲ್ಲಿ ವನಮಹೋತ್ಸವ
Update: 2017-06-12 19:14 IST
ಮಂಗಳೂರು, ಜೂ.12: ವಿಶ್ವ ಪರಿಸರ ದಿನದ ಅಂಗವಾಗಿ ಶ್ರೀ ಸೋಮನಾಥ ದೇವಸ್ಥಾನದಲ್ಲಿ ವನಮಹೋತ್ಸವ ಆಚರಿಸಲಾಯಿತು.
ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ವಿಶ್ವನಾಥ ಗಟ್ಟಿ ವಗ್ಗ ಸಸಿ ನೆಡವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭ ನೂತನ ಕಾರ್ಯನಿರ್ವಹಣಾಧಿಕಾರಿ ಅರವಿಂದ, ಸದಸ್ಯರಾದ ರಾಘವ ಆರ್. ಉಚ್ಚಿಲ್, ರುಕ್ಮಯ ಬಂಗೇರ, ಟಿ. ಸೋಮಯ್ಯ, ಸುಧಾಕರ ಭಂಡಾರಿ, ಮಾಜಿ ಟ್ರಸ್ಟಿಗಳಾದ ಕೃಷ್ಣಪ್ಪಅಡ್ಕ ಮತ್ತು ಪರಿಸರದ ಸಾರ್ವಜನಿಕರು ಉಪಸ್ಥಿತರಿದ್ದರು.