ಶ್ರೀ ಕ್ಷೇತ್ರ ಕದ್ರಿಯಲ್ಲಿ ಸೀಯಾಳಾಭಿಷೇಕ
Update: 2017-06-12 19:15 IST
ಮಂಗಳೂರು, ಜೂ.12: ಶ್ರೀ ಕ್ಷೇತ್ರ ಕದ್ರಿಯಲ್ಲಿ ಲೋಕಕಲ್ಯಾಣರ್ಥ, ಸುಭಿಕ್ಷೇಗಾಗಿ ಸೀಯಾಳಾಭಿಷೇಕವು ವಿಠಲದಾಸ ತಂತ್ರಿಯ ಮಾರ್ಗದರ್ಶನದಲ್ಲಿ ಜರಗಿತು.
ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎ.ಜೆ. ಶೆಟ್ಟಿ, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ, ದೇವಳದ ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ, ವೇದಾಮೂರ್ತಿಗಳಾದ ರಾಮಣ್ಣ ಅಡಿಗ, ಪ್ರಭಾಕರ ಅಡಿಗ, ವಾಸುದೇವ ಅಡಿಗ, ರಾಘವೇಂದ್ರ ಅಡಿಗ, ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಸುರೇಶ್ ಕುಮಾರ್, ದಿನೇಶ್ ದೇವಾಡಿಗ, ದಯಾಕರ ಮೆಂಡನ್, ಪುಷ್ಪಲತಾ ಶೆಟ್ಟಿ, ಚಂದ್ರಕಲಾ ದೀಪಕ್, ಮನಪಾ ಸದಸ್ಯರಾದ ರೂಪಾ ಡಿ. ಬಂಗೇರ, ಅಶೋಕ್ ಡಿ.ಕೆ., ಭಾಸ್ಕರ ಮೊಯ್ಲಿ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ಪ್ರವೀಣ್ ಭಟ್, ಸುಂದರ್ ಶೆಟ್ಟಿ, ಸುಧಾಕರ ರಾವ್ ಪೇಜಾವರ, ಗೋಕುಲ್ ಕದ್ರಿ, ರತ್ನಾಕರ ಜೈನ್ ಉಪಸ್ಥಿತರಿದ್ದರು.