×
Ad

ರಾಮಕ್ಷತ್ರೀಯ ಸಮಾಜ ಸೇವಾ ಸಂಘ ಉದ್ಘಾಟನೆ

Update: 2017-06-12 21:00 IST

ಹೆಬ್ರಿ, ಜೂ.12: ಶ್ರೀ ರಾಮಕ್ಷತ್ರೀಯ ಸಮಾಜ ಸೇವಾ ಸಂಘವನ್ನು ಬೈಂದೂರಿನ ಮಾಜಿ ಶಾಸಕ ಕೆ.ಲಕ್ಷ್ಮಿನಾರಾಯಣ ಇತ್ತೀಚೆಗೆ ಹೆಬ್ರಿ ಚೈತನ್ಯ ಯುವ ವೃಂದದ ಸಭಾಭವನದಲ್ಲಿ ಉದ್ಘಾಟಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ನೂತನ ಅಧ್ಯಕ್ಷ ಕೆ.ಶ್ರೀನಿವಾಸ ಸೇರ್ವೆಗಾರ್ ಮಾತನಾಡಿ, ಸಮಾಜದ ಅಸಹಾಯಕರನ್ನು ಗುರುತಿಸಿ ನೆರವು ನೀಡುವ ಕೈಕಂರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು. ಸಮಾಜದ ಪ್ರತಿಭೆಗಳನ್ನು ಕೂಡ ಬೆಳಕಿಗೆ ತರುವ ಕೆಲಸ ನಡೆಸಬೇಕಾಗಿದೆ ಎಂದು ತಿಳಿಸಿದರು.

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಿ.ನ.ಶ್ರೀನಿವಾಸ್, ಉದ್ಯಮಿ ಕೆ. ನಾಗರಾಜ್, ಶೃಂಗೇರಿ ಪೊಲೀಸ್ ವೃತ್ತ ನಿರೀಕ್ಷಕ ಪ್ರಮೋದ್ ಕುಮಾರ್, ಕಾರ್ಕಳ ರಾಮಕ್ಷತ್ರೀಯ ಸಂದ ಅಧ್ಯಕ್ಷ ಪ್ರಸನ್ನ ಕೆ.ಬಿ., ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಜಯಾನಂದ ಹೋಬಳಿದಾರ್, ಉದ್ಯಮಿ ರವೀಂದ್ರ ಉಳ್ಳೂರ್, ಬೆಂಗಳೂರು ರಾಮಕ್ಷತ್ರೀಯ ಮಾಸಪತ್ರಿಕೆಯ ಸಂಪಾದಕ ಬಿ.ಎಂ.ಶ್ರೀನಾಥ್ ಬೈಂದೂರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ನಿವೃತ್ತ ವಲಪಾಲಕ ಗಂಗಾಧರ್, ಮಣಿಪಾಲ ಕೆಎಸ್ ಎಸ್‌ಐಡಿಸಿಯ ಸುಬ್ರಹ್ಮಣ್ಯ ಆರ್., ಶಿಕ್ಷಣ ಇಲಾಖೆಯ ನಿವೃತ್ತ ಅಧಿಕಾರಿ ಕೆ. ಗಂಗಾಧರ್ ರಾವ್, ನಿವೃತ್ತ ಪೊಸ್ಟ್ ಮಾಸ್ಟರ್ ಬಿ.ಶಂಕರ್, ಆಗುಂಬೆಯ ವಾಸುದೇವ ರಾವ್, ಆರೋಗ್ಯ ಇಲಾಖೆಯ ನಿವೃತ್ತ ನೌಕರ ವಿಜಯ ಜೆ. ಪಾಲೇಮಾರ್, ಹಿರಿಯರಾದ ಪ್ರಭಾಕರ ಸೇರ್ವೆಗಾರ್, ವಾಸುದೇವ ಸೇರ್ವೆ ಗಾರ್, ನಿತ್ಯಾನಂದ ಸೇರ್ವೆಗಾರ್ ಅವರನ್ನು ಸನ್ಮಾನಿಸಲಾಯಿತು. ಹೆಬ್ರಿ ಸಂಘದ ಕಾರ್ಯದರ್ಶಿ ಸಂತೋಷ್ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಉಪಾಧ್ಯಕ್ಷ ವಿಜಯ ಕುಮಾರ್ ಸ್ವಾಗತಿಸಿದರು. ಮಲ್ಲಿಕಾ ಸೀತಾರಾಮ್ ವಂದಿಸಿದರು. ಅನಿತಾ ಶಂಕರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News