×
Ad

ವೃದ್ಧ ಆತ್ಮಹತ್ಯೆ; ಕೊಲೆಯ ಶಂಕೆ

Update: 2017-06-12 21:58 IST

ಕೋಟ, ಜೂ.12: ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ನಂಚಾರು ಗ್ರಾಮದ ತಡಗಲು ನಿವಾಸಿ ಶಿವರಾಮ ಶೆಟ್ಟಿ(76) ಎಂಬವರು ಜೂ.12 ರಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಇದೊಂದು ಕೊಲೆಯಾಗಿರಬಹುದೆಂದು ಮೃತರ ಮಗ ಉದಯ ಕುಮಾರ್ ಶೆಟ್ಟಿ ಸಂಶಯ ವ್ಯಕ್ತಪಡಿಸಿದ್ದಾರೆ.

ಶಿವರಾಮ ಶೆಟ್ಟಿ ತಡಗಲು ಎಂಬಲ್ಲಿರುವ ಸರಕಾರಿ ಜಾಗದಲ್ಲಿ ತಗಡಿನ ಮನೆಯಲ್ಲಿ ವಾಸವಾಗಿದ್ದು, ಜಾಗದ ವಿಷಯದಲ್ಲಿ ಅವರು ಹಾಗೂ ಅವರ ತಮ್ಮ ಬಾಲಕೃಷ್ಣ ಶೆಟ್ಟಿ ನಡುವೆ ಅನೇಕ ವರ್ಷಗಳಿಂದ ತಕರಾರು ನಡೆಯುತ್ತಿತ್ತು. ಇದೇ ವಿಷಯದಲ್ಲಿ ಈ ಹಿಂದೆ ಹಲವು ಬಾರಿ ಇವರ ಮಧ್ಯೆ ಜಗಳವಾಗಿ ಬಾಲಕೃಷ್ಣ ಶೆಟ್ಟಿ, ಶಿವರಾಮ ಶೆಟ್ಟಿಗೆ ಜೀವ ಬೆದರಿಕೆ ಹಾಕಿದ್ದರು.

ತಂದೆ ಶಿವರಾಮ ಶೆಟ್ಟಿ ಜಾಗದ ಸಮಸ್ಯೆಯ ಬಗ್ಗೆ ಜೀವನದಲ್ಲಿ ನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಅಥವಾ ನನ್ನ ತಂದೆಯ ತಮ್ಮ ಬಾಲಕೃಷ್ಣ ಶೆಟ್ಟಿ ಕೊಲೆ ಮಾಡಿ ಗೇರು ಮರದ ಗೆಲ್ಲಿಗೆ ಕಟ್ಟಿರಲೂ ಬಹುದು. ಈ ಬಗ್ಗೆ ಸಂಶಯವಿರುವುದಾಗಿ ಉದಯ ಕುಮಾರ್ ಶೆಟ್ಟಿ ದೂರಿದ್ದಾರೆ. ಅದರಂತೆ ಪ್ರಕರಣ ದಾಖಲಿಸಿಕೊಂಡ ಕೋಟ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News