ಟಿಪ್ಪರ್ ಢಿಕ್ಕಿ: ಇಬ್ಬರಿಗೆ ಗಾಯ
Update: 2017-06-12 22:37 IST
ಮಂಗಳೂರು, ಜೂ. 12: ಟಿಪ್ಪರ್‌ವೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ತಣ್ಣೀರು ಬಾವಿ ಎನ್‌ಎಂಪಿಟಿ ಬಳಿ ನಡೆದಿದೆ.
ಬೆಂಗ್ರೆಯ ನಿವಾಸಿ ಮುಹಮ್ಮದ್ ಸಿಮಕ್ ಮತ್ತು ಅಬ್ದುಲ್ ಕರೀಂ ಎಂಬವರೇ ಗಾಯಗೊಂಡವರು.
ಇವರು ದ್ವಿ ಚಕ್ರ ವಾಹನದಲ್ಲಿ ಬೆಂಗ್ರೆಯಿಂದ ಮಂಗಳೂರಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ತಣ್ಣೀರುಬಾವಿ ರಸ್ತೆಯ ಎನ್‌ಎಂಪಿಟಿಯ ಸಿಲ್ವರ್ ಜುಬಿಲಿ ಗೇಟ್‌ನ ಎದುರು ತಲುಪಿದಾಗ ಕೂಳೂರಿನಿಂದ ಬೆಂಗ್ರೆಯ ಕೆಡೆಗೆ ಬರುತ್ತಿದ್ದ ಟಿಪ್ಪರ್ ಢಿಕ್ಕಿ ಹೊಡೆಯಿತೆನ್ನಲಾಗಿದೆ.
ಪರಿಣಾಮವಾಗಿ ಚಾಲಕ ಸಿಮಕ್‌ರ ಬಲಕಾಲಿನ ಮೊಣಗಂಟು ಮತ್ತು ಮುಖಕ್ಕೆ ತೀವ್ರ ಸ್ವರೂಪದ ಗಾಯ ಹಾಗೂ ಸಹಸವಾರ ಕರೀಂ ಅವರ ಬಲಕಾಲಿಗೆ ಗಾಯವಾಗಿದ್ದು, ಇಬ್ಬರನ್ನೂ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಟಿಪ್ಪರ್ ಚಾಲಕ ಕಬೀರ್ ಹುಸೇನ್‌ರ ನಿರ್ಲಕ್ಷದ ಚಾಲನೆಯೇ ಘಟನಗೆ ಕಾರಣ ಎನ್ನಲಾಗಿದೆ. ಈ ಬಗ್ಗೆ ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.