×
Ad

ಫಳೀರ್ ವಾಣಿಜ್ಯ ಸಮುಚ್ಚಯದ ನೆಲ ಅಂತಸ್ತಿನಲ್ಲಿ ನೆರೆ: ಬಾಗಿಲು ಮುಚ್ಚಿದ ಅಂಗಡಿಗಳು

Update: 2017-06-12 23:13 IST

ಮಂಗಳೂರು, ಜೂ. 11: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಬಿರುಸಿನ ಮಳೆಗೆ ನಗರದ ಫಳ್ನೀರ್ ರಸ್ತೆಯಲ್ಲಿರುವ ಯುನಿಟಿ ಆಸ್ಪತ್ರೆ ಎದುರಿನ ‘ವೆಸ್ಟ್ ಗೇಟ್’ ವಾಣಿಜ್ಯ ಸಂಕೀರ್ಣದ ನೆಲ ಅಂತಸ್ತಿನಲ್ಲಿ ಕೃತಕ ನೆರೆ ಸಷ್ಟಿಯಾಗಿರುವ ಘಟನೆ ಸೋಮವಾರ ನಡೆದಿದೆ.

ಬೆಳಗ್ಗೆಯಿಂದಲೇ ಕಟ್ಟಡದ ನೆಲ ಅಂತಸ್ತಿನಲ್ಲಿ ಕೃತಕ ನೆರೆ ಕಾಣಿಸಿಕೊಂಡಿದ್ದು, ಅಂಗಡಿಯ ಮಾಲಕರು ತಮ್ಮ ಅಗಂಡಿಗಳನ್ನು ತೆರೆಯಲು ಸಾಧ್ಯವಾಗಿಲ್ಲ. ಒಳಚರಂಡಿಯಲ್ಲಿರುವ ನೀರು ತುಂಬಿ ಹರಿದಿರುವುದರಿಂದ ಕಟ್ಟಡದಲ್ಲಿ ನೀರು ಸಂಗ್ರಹವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಮೊಬೈಲ್ ಅಂಗಡಿಗಳು, ಮೆಡಿಕಲ್ ಶಾಪ್, ಸೆಲೂನ್, ಜ್ಯೂಸ್ ಅಂಗಡಿ, ರೆಸ್ಟೋರೆಂಟ್ ಮೊದಲಾದವರು ನೆಲ ಅಂತಸ್ತಿನಲ್ಲಿರುವ 13 ಅಂಗಡಿಗಳಿಗೆ ಬೀಗ ಜಡಿಯಲಾಗಿದೆ.

‘ವೆಸ್ಟ್ ಗೇಡ್’ ವಾಣಿಜ್ಯ ಸಂಕೀರ್ಣವು ಎಸ್.ಎಂ.ರಶೀದ್ ಹಾಜಿ ಅವರಿಗೆ ಸೇರಿದೆ ಎನ್ನಲಾಗಿದೆ. ಮೇಯರ್ ಭೇಟಿ ಇದೇ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಕವಿತಾ ಸನಿಲ್ ಅವರು ಸಮುಚ್ಚಯಕ್ಕೆ ಭೇಟಿ ನೀಡಿ ಕೃತಕ ನೆರೆ ಸೃಷ್ಟಿಯಾಗಿರುವುದನ್ನು ವೀಕ್ಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News