×
Ad

ಕರಾವಳಿ ಕಾವಲು ಪಡೆಯ ಮೂವರಿಗೆ ಸನ್ಮಾನ

Update: 2017-06-12 23:34 IST

ಮಂಗಳೂರು, ಜೂ. 12: ಉಳ್ಳಾಲ ಬಳಿ ಸಮುದ್ರದಲ್ಲಿ ಮುಳುಗುತ್ತಿದ್ದ ಬಾರ್ಜ್‌ನಲ್ಲಿ ಸಿಲುಕಿಕೊಂಡಿದ್ದ ಕೊಂಡಿದ್ದ 27 ಮಂದಿಯ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಕರಾವಳಿ ಕಾವಲು ಪೊಲೀಸ್ ಪಡೆಯ ಮೂವರನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮೀನುಗಾರರ ವತಿಯಿಂದ ಸುಲ್ತಾನ್ ಬತ್ತೇರಿ ತಂಗುದಾಣ ಬಳಿ ಸೋಮವಾರ ಸನ್ಮಾನಿಸಲಾಯಿತು.

ಕರಾವಳಿ ಕಾವಲು ಪೊಲೀಸ್ ಸಿಬ್ಬಂದಿಗಳಾದ ಕ್ಯಾಪ್ಟನ್ ರಾಜೇಶ್ ಶ್ರೀವಾಸ್ತವ್, ಕ್ಯಾಪ್ಟನ್ ಚಂದ್ರಶೇಖರ್  ಫುರ್ಟಾಡೊ ಮತ್ತು ಕ್ಯಾಪ್ಟನ್ ಆರ್.ಜಿ.ಬಿರಾದಾರ್ ಅವರನ್ನು ಸನ್ಮಾನಿಸಲಾಯಿತು.

ಬೋಳೂರು ಮೊಗವೀರ ಗ್ರಾಮದ ಅಧ್ಯಕ್ಷ ರಾಜಶೇಖರ ಕರ್ಕೇರ, ಮಾಜಿ ಕಾರ್ಪೊರೇಟರ್ ಕಮಲಾಕ್ಷ ಸಾಲ್ಯಾನ್, ಉದಯ ಕುಮಾರ್ ಕರ್ಕೇರ, ದೀಪಕ್ ರೋಶನ್ ಸನ್ಮಾನಿಸಿದರು.

ಜೀವ ರಕ್ಷಣೆ ಸಂತೃಪ್ತಿ ತಂದಿದೆ: ಜೂ.4ರಂದು ಧರ್ತಿ ಕನ್‌ಸ್ಟ್ರಕ್ಷನ್‌ನ ಬಾರ್ಜ್ ಸಮುದ್ರದಲ್ಲಿ ಮುಳುಗುವ ಭೀತಿಯಲ್ಲಿ ದ್ದಾಗ ಅದರೊಳಗೆ ಸಿಲುಕಿಕೊಂಡಿದ್ದ 27 ಮಂದಿಯ ರಕ್ಷಣೆ ಮಾಡಿರುವುದು ಸಂತೃಪ್ತಿ ತಂದಿದೆ ಎಂದು ಕ್ಯಾಪ್ಟನ್ ಆರ್.ಜಿ.ಬಿರಾದಾರ್ ಹೇಳಿದರು.

ಮೀನುಗಾರರು ಬೋಟು ಖರೀದಿಸುವಾಗ ಸುಮಾರು 70ರಿಂದ 80 ಲಕ್ಷ ರೂ. ವೆರೆಗೆ ಖರ್ಚು ಮಾಡುತ್ತಾರೆ. ಆದರೆ, ಮೀನುಗಾರರ ಸುರಕ್ಷತೆ ಸಂಬಂಧಿಸಿ ಎಚ್ಚರಿಕೆ ವಹಿಸುವುದಿಲ್ಲ. ಈ ಬಗ್ಗೆ ಕಾಳಜಿ ವಹಿಸಬೇಕು. ಮೀನುಗಾರರು ಮೀನುಗಾರಿಕೆಗೆ ನಿಷೇಧ ಇರುವ ಸಂದರ್ಭದಲ್ಲಿ ಸಮುದ್ರಕ್ಕೆ ಇಳಿಯಬಾರದು. ಈ ಬಗ್ಗೆ ಎಚ್ಚರಿಕೆ ವಹಿಸಬೇಕೆಂದು ಸಲಹೆ ನೀಡಿದರು. ಮೀನುಗಾರ ದೇವಾನಂದ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News