ಗೃಹಿಣಿ ಸಾವು
Update: 2017-06-13 17:47 IST
ಮೂಡುಬಿದಿರೆ, ಜೂ13: ಕಡಂದಲೆ ಗ್ರಾಮದ ತೊಂದೊಟ್ಟು ಮನೆಯ ಭಾಸ್ಕರ ಕೋಟ್ಯಾನ್ ಅವರ ಪತ್ನಿ ಶಕುಂತಲಾ (52) ರವಿವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಕಳೆದ ಮೇ 28ರಂದು ಬೈಕಿನಲ್ಲಿ ಹಿಂಬದಿ ಸವಾರರಾಗಿದ್ದಾಗ ಬಿದ್ದು ತಲೆಗೆ ತೀವ್ರ ಗಾಯಗೊಂಡಿದ್ದ ಅವರು ಬಳಿಕ ಕೋಮಾಗೆ ಜಾರಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.