'ಟಿ ಆರ್ ಎಫ್' ವತಿಯಿಂದ ಲೇಡಿಗೋಷನ್ ಆಸ್ಪತ್ರೆಯಲ್ಲಿ ಉಡುಪು ವಿತರಣೆ
ಮಂಗಳೂರು, ಜೂ.13: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಮತ್ತು ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಗರದ ಲೇಡಿಗೋಷನ್ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿರುವ 272 ಮಹಿಳೆಯರಿಗೆ ಉಡುಪು ವಿತರಿಸುವ ಕಾರ್ಯಕ್ರಮ ಇಂದು ಜರಗಿತು.
ಕಾರ್ಯಕ್ರಮದಲ್ಲಿ ಕುಂಡಡ್ಕ ಮಸೀದಿಯ ಖತೀಬ್ ಸಿರಾಜುದ್ದೀನ್ ಮದನಿ, ಕಾರ್ಪೊರೇಟರ್‌ಗಳಾದ ಅಬ್ದುಲ್ ಅಝೀರ್ ಕುದ್ರೋಳಿ ಮತ್ತು ಅಬ್ದುಲ್ ಲತೀಫ್ ಕಂದಕ, ಡೆಕ್ಕನ್ ಪ್ಲಾಸ್ಟ್ ಇಂಡಸ್ಟ್ರಿಯ ಆಡಳಿತ ನಿರ್ದೇಶಕ ಬಿ.ಎಚ್. ಅಸ್ಗರ್ ಹಾಜಿ, ಮಂಗಳೂರು ಧರ್ಮ ಪ್ರಾಂತ್ಯ ಕೆಥೊಲಿಕ್ ಸಭಾ ಅಧ್ಯಕ್ಷ ಅನಿಲ್ ಪೆರ್ಮಾಯಿ, ಪುತ್ತಿಗೆ ಬಿಲ್ಡರ್ಸ್& ಡೆವಲೆಪರ್ಸ್‌ನ ಆಡಳಿತ ನಿರ್ದೇಶಕ ಫತೇ ಮುಹಮ್ಮದ್ ಪುತ್ತಿಗೆ, ನಂಡೆ ಪೆಂಙಳ್ ಸ್ವಾಗತ ಸಮಿತಿಯ ಅಧ್ಯಕ್ಷ ನೌಷಾದ್ ಹಾಜಿ ಸೂರಲ್ಪಾಡಿ, ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ನ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಹಾಜಿ ಕಿನ್ಯ, ಕೋಸ್ಟಲ್ ಫಿಶರೀಸ್ ನ ಆಡಳಿತ ನಿರ್ದೇಶಕ ನಿಸಾರ್ ಮುಹಮ್ಮದ್, ಜೆ ಡಿ ಎಸ್ ರಾಜ್ಯ ಅಲ್ಪಸಂಖ್ಯಾತರ ಘಟಕದ ಸಂಘಟನಾ ಕಾರ್ಯದರ್ಶಿ ಮುನೀರ್ ಮುಕ್ಕಚೇರಿ, ಸುಲೈಮಾನ್ ಶೇಖ್ ಬೆಳುವಾಯಿ ವಿಶ್ವಾಸ್ ಎಸ್ಟೇಟ್ಸ್, ಉದ್ಯಮಿ ಅಲ್ತಾಫ್ ಮಂಗಳೂರು , ಅಬ್ದುಲ್ ಹಮೀದ್ ಪಚ್ಚಕಂಬ ಇಂಡಿಯನ್ ಪ್ಲೈವುಡ್, ಲೇಡಿಗೋಶನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ. ಸವಿತಾ, ನರ್ಸ್‌ಗಳಾದ ಪಾರ್ವತಿ, ಭವಾನಿ, ಸಿ.ಎಚ್.ಡಿ. ಮೇನೇಜರ್ ಗುರುಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಡೆಕ್ಕನ್ ಪ್ಲಾಸ್ಟ್ ಇಂಡಸ್ಟ್ರಿಯ ಆಡಳಿತ ನಿರ್ದೇಶಕ ಬಿ.ಎಚ್. ಅಸ್ಗರ್ ಹಾಜಿ, ಆಸ್ಪತ್ರೆಯ ಅಗತ್ಯತೆಯನ್ನು ಮನಗಂಡು ರೋಗಿಗಳಿಗೆ ಬಿಸಿ ಮತ್ತು ತಂಪಾದ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ವಾಟರ್ ಕೂಲರ್ ಮತ್ತು ಪ್ಲಾಸ್ಟಿಕ್ ಬಕೆಟ್‌ಗಳನ್ನು ಕೊಡುಗೆ ನೀಡುವುದಾಗಿ ಭರವಸೆ ಇತ್ತರು. ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್‌ನ ಸ್ಥಾಪಕ ಜೋಸೆಫ್ ಕ್ರಾಸ್ತಾ ಪ್ರಸ್ತಾವನೆಗೈದರು. ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಅಧ್ಯಕ್ಷ ರಿಯಾಝ್ ಕಣ್ಣೂರು ಸ್ವಾಗತಿಸಿದರು ಮತ್ತು ಸಲಹೆಗಾರ ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.