ಮೊವಾಡಿ ಘಟನೆಯಲ್ಲಿ ಸಂಘಪರಿವಾರದ ಪಾತ್ರ ಇಲ್ಲ: ಜಯನ್ ಮಲ್ಪೆ

Update: 2017-06-13 14:37 GMT

ಗಂಗೊಳ್ಳಿ, ಜೂ.13: ಮೊವಾಡಿ ಕೊರಗ ಸಮುದಾಯದ ಮೇಲೆ ನಡೆದ ದೌರ್ಜನ್ಯ ವಿಚಾರ ಮುಂದಿಟ್ಟುಕೊಂಡು ದಲಿತರನ್ನು ದಲಿತರ ವಿರುದ್ಧ ಎತ್ತಿ ಕಟ್ಟುವ ಕೆಲಸ ನಡೆಸಲಾಗುತ್ತಿದೆ. ಈ ಘಟನೆಯಲ್ಲಿ ಸಂಘ ಪರಿವಾರದ ಮುಖಂಡರ ಪಾತ್ರ ಇಲ್ಲದಿದ್ದರೂ ಸಂಘಪರಿವಾರದ ಹೆಸರು ಬಳಸಿಕೊಂಡು ದಲಿತರನ್ನು ನಾಶ ಮಾಡುವ ವ್ಯವಸ್ಥಿತ ಸಂಚು ನಡೆಯುತ್ತಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮುಖಂಡ ಜಯನ್ ಮಲ್ಪೆಆರೋಪಿಸಿದ್ದಾರೆ.

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಮೊವಾಡಿ ಗ್ರಾಮ ಶಾಖೆ ಆಶ್ರಯದಲ್ಲಿ ಸೋಮವಾರ ಮೊವಾಡಿಯಲ್ಲಿ ಜರಗಿದ ಮೊವಾಡಿ ಸ್ವಾಭಿಮಾನಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ದಸಂಸ ಮೊವಾಡಿ ಗ್ರಾಮ ಶಾಖೆಯ ಸಂಚಾಲಕ ಸದಾನಂದ ಮೊವಾಡಿ ಅಧ್ಯಕ್ಷತೆ ವಹಿಸಿದ್ದರು. ದಸಂಸ ಉಡುಪಿ ಜಿಲ್ಲಾ ಸಂಘಟನಾ ಸಂಚಾಲಕ ಟಿ.ಮಂಜುನಾಥ ಗಿಳಿಯಾರು ದಿಕ್ಸೂಚಿ ಬಾಷಣ ಮಾಡಿದರು. ಕುಂದಾಪುರ ವಕೀಲ ಸತೀಶ ಕಾಳಾವರ್ಕರ್, ದಸಂಸ ಉಡುಪಿ ಜಿಲ್ಲಾ ಸಂಘಟನಾ ಸಂಚಾಲಕ ವಾಸುದೇವ ಮುದೂರು, ಕುಂದಾಪುರ ತಾಲೂಕು ಮಹಿಳಾ ಒಕ್ಕೂಟದ ಸಂಚಾಲಕಿ ಗೀತಾ ಸುರೇಶ ಕುಮಾರ್, ಪ್ರಗತಿಪರ ಹೋರಾಟಗಾರ ಧರ್ಮರಾಜ ಮುದಲಿಯಾರ್, ಗೋಪಾಲ ಕಳಂಜೆ, ಪ್ರಭಾಕರ ವಿ., ರಾಮ ಕುಂದಾಪುರ, ಗೋಪಾಲಕೃಷ್ಣ ನಾಡ, ಗಿರೀಶ ಕುಮಾರ್ ಗಂಗೊಳ್ಳಿ, ಮಹೆೀಶ ಜಿ. ಗಂಗೊಳ್ಳಿ ಉಪಸ್ಥಿತರಿದ್ದರು.

ಪ್ರಭಾಕರ ಮೊವಾಡಿ ಸ್ವಾಗತಿಸಿದರು. ಕುಂದಾಪುರ ತಾಲೂಕು ಸಂಚಾಲಕ ರಾಜು ಕೆ.ಸಿ. ಬೆಟ್ಟಿನಮನೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಜೀವ ಹೊಸಾಡು ಮತ್ತು ಸಂತೋಷ ಆನಗಳ್ಳಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News