×
Ad

ನೇಣು ಬಿಗಿದು ಆತ್ಮಹತ್ಯೆ

Update: 2017-06-13 20:58 IST

 ಪಡುಬಿದ್ರೆ, ಜೂ. 13: ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಡುಬಿದ್ರೆ ಬ್ರಹ್ಮಸ್ಥಾನದ ಬಳಿಯ ಕಾಡಿಪಟ್ಣದಲ್ಲಿ ನಡೆದಿದೆ.
 

ಇಲ್ಲಿನ ಸಹಾನ ನಿವಾಸಿ ರಾಜೇಶ್ ಮೆಂಡನ್ (40) ಎಂಬವರು ಆತ್ಮಹತ್ಯೆ ಮಾಡಿಕೊಂಡವರು. ಇವರು ಮಂಗಳೂರಿನ ಎನ್‌ಎಂಪಿಟಿ ಉದ್ಯೋಗಿಯಾಗಿದ್ದರು. ತಿಂಗಳ ಹಿಂದೆಯಷ್ಟೆ ಅವರ ಗೃಹಪ್ರವೇಶ ಆಗಿತ್ತು. ಇತ್ತೀಚೆಗೆ ಮಾನಸಿಕ ಒತ್ತಡದಲ್ಲಿದ್ದರು. ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತರ ಪತ್ನಿ ಮುಂಡ್ಕೂರಿನ ಶಾಲೆಯೊಂದರಲ್ಲಿ ಶಿಕ್ಷಕಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News