×
Ad

ಗ್ರಾಹಕರ ಸೋಗಿನಲ್ಲಿ ಕರಿಮಣಿ ಸರ ಕಳವು

Update: 2017-06-13 21:47 IST

ಕಾರ್ಕಳ, ಜೂ.13: ಕಾರ್ಕಳದ ಆಭರಣ ಜ್ಯುವೆಲ್ಲರಿ ಶೋರೂಂಗೆ ಗ್ರಾಹಕರ ಸೋಗಿನಲ್ಲಿ ಬಂದ ಇಬ್ಬರು ಮಹಿಳೆಯರ ಸಹಿತ ಮೂವರು ಲಕ್ಷಾಂತರ ರೂ. ವೌಲ್ಯದ ಕರಿಮಣಿ ಸರ ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

ಜೂ.12ರಂದು ಸಂಜೆ 4:15ರ ಸುಮಾರಿಗೆ ಶೋರೂಂಗೆ ಗ್ರಾಹಕರಂತೆ ಬಂದ ಇಬ್ಬರು ಮಹಿಳೆಯರು ಮತ್ತು ಒಬ್ಬ ಗಂಡಸು, ನೆಲ ಅಂತಸ್ತಿನ ಸಿಬ್ಬಂದಿ ಯವರ ಗಮನಕ್ಕೆ ಬಾರದ ರೀತಿಯಲ್ಲಿ ಎದುರುಗಡೆ ಟ್ರೇಯಲ್ಲಿದ್ದ ಸುಮಾರು 32 ಗ್ರಾಂ ಕರಿಮಣಿ ಸರ ಮತ್ತು 40 ಗ್ರಾಂ ಕರಿಮಣಿ ಸರವನ್ನು ಕಳವು ಮಾಡಿ ದ್ದಾರೆ.

ಈ ಎರಡು ಕರಿಮಣಿ ಸರದ ಒಟ್ಟು ಮೌಲ್ಯ 2,35,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News