ಪುನರ್ವಸತಿಯಲ್ಲಿದ್ದ ಬಾಲಕ ನಾಪತ್ತೆ
Update: 2017-06-13 21:52 IST
ಕೋಟ, ಜೂ.13: ಪರೀಕ್ಷೆಯಲ್ಲಿ ಫೇಲಾದ ಚಿಂತೆಯಲ್ಲಿ ಬೇಳೂರು ಗ್ರಾಮದ ಸ್ಪೂರ್ತ್ಪಿಧಾಮದಲ್ಲಿ ಪುನರ್ವಸತಿಯಲ್ಲಿದ್ದ ಬಾಲಕ ನೋರ್ವ ತಪ್ಪಿಸಿಕೊಂಡು ಪರಾರಿಯಾಗಿರುವ ಘಟನೆ ಜೂ.10ರಂದು ನಡೆದಿದೆ.
ನಾಪತ್ತೆಯಾದ ಬಾಲಕನನ್ನು ವಿಠಲ(16) ಎಂದು ಗುರುತಿಸಲಾಗಿದೆ. ಈತ ಕೆದೂರು ಸರಕಾರಿ ಪ್ರೌಢಶಾಲೆಯಲ್ಲಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿ ಮರು ಪರೀಕ್ಷೆ ಕಟ್ಟಿ ತಯಾರಿ ನಡೆಸುತ್ತಿದ್ದನು.
ಆದರೆ ಮರು ಪರೀಕ್ಷೆ ಬರೆಯಲು ಇಷ್ಟವಿಲ್ಲದ ಆತ ಸೂರ್ತ್ಪಿಧಾಮದಿಂದ ತಪ್ಪಿಸಿಕೊಂಡು ಹೋಗಿ ನಾಪತ್ತೆಯಾಗಿ ದ್ದಾನೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.