ಪಜೀರು: ಭಾರೀ ಮಳೆಗೆ ಮನೆಯ ಮೇಲ್ಛಾವಣಿ ಕುಸಿತ
Update: 2017-06-13 21:53 IST
ಕೊಣಾಜೆ, ಜೂ. 13: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪಜೀರು ಗ್ರಾಮ ಕುಂಟಲಹಿತ್ತಿಲು ಬಳಿ ಮನೆಯೊಂದರ ಮೇಲ್ಛಾವಣಿ ಕುಸಿದು ಹಾನಿಯಾದ ಘಟನೆ ಸಂಭವಿಸಿದೆ
ಈ ಸಂದರ್ಭದಲ್ಲಿ ಮನೆಯೊಳಗೆ ಯಾರೂ ಇಲ್ಲದ ಕಾರಣ ಮನೆಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪಜೀರು ಗ್ರಾಮದ ಕುಂಟಲಹಿತ್ತಿಲು ಎಂಬಲ್ಲಿಯ ಪಿ.ಕೆ.ರಾಮ ಎಂಬವರ ಮನೆಯು ಭಾರೀ ಗಾಳಿ, ಮಳೆಗೆ ಕುಸಿದು ಬಿದ್ದಿದೆ. ಮನೆಯಲ್ಲಿ ರಾಮ ಹಾಗೂ ಅವರ ಪತ್ನಿ ಹಾಗೂ ಇಬ್ಬರು ಮಕ್ಕಳು ವಾಸವಿದ್ದು ಮದ್ಯಾಹ್ನ ಘಟನೆ ನಡೆದಾಗ ಮನೆಯೊಳಗೆ ಯಾರೂ ಇರಲಿಲ್ಲ ಎನ್ನಲಾಗಿದೆ.
ಮನೆಯ ಮೇಲ್ಚಾವಣಿ ಕುಸಿದ ಪರಿಣಾಮ ಮನೆಯೊಳಗಿನ ವಸ್ತುಗಳಿಗೂ ಹಾನಿಯಾಗಿದ್ದು ಸುಮಾರು ಎರಡು ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ರಾಮ ಅವರದ್ದು ಬಡ ಕುಟುಂಬವಾಗಿದ್ದು ಪಶುಸಂಗೋಪನೆ ಮಾಡಿ ಜೀವನ ನಿರ್ವಹಿಸುತ್ತಿದ್ದಾರೆ. ಇದೀಗ ಮನೆಯು ಮಳೆಗೆ ಕುಸಿದ ಪರಿಣಾಮ ಬಡ ಕುಟುಂಬ ಸಂಕಷ್ಟ ಎದುರಿಸುವಂತಾಗಿದೆ.