ಕಲಾಪ ವೀಕ್ಷಣೆಗೆ ಅಡ್ಡಿ: ಜೆಡಿಎಸ್ ಖಂಡನೆ
Update: 2017-06-13 23:56 IST
ಮಂಗಳೂರು, ಜೂ.13: ವಿಧಾನ ಮಂಡಲ ಅಧಿವೇಶನ ವೀಕ್ಷಿಸಲು ತೆರಳುತ್ತಿದ್ದ ಬೆಂಗಳೂರಿನ ಕಾಲೇಜ್ ವಿದ್ಯಾರ್ಥಿನಿಯನ್ನು ತಡೆದು ನಿಲ್ಲಸಿದ ಮಾರ್ಷಲ್ ಗಳ ಕ್ರಮವನ್ನು ದ.ಕ.ಜಿಲ್ಲಾ ವಿದ್ಯಾರ್ಥಿ ಜನತಾ ದಳ ಖಂಡಿಸಿದೆ.
ಸ್ಕಾರ್ಫ್ ಧರಿಸಿದ ಏಕೈಕ ಕಾರಣಕ್ಕಾಗಿ ಮಾರ್ಷಲ್‌ಗಳು ಹೀಗೆ ಮಾಡಿರುವುದು ಸರಿಯಲ್ಲ. ಇದು ಸಂವಿಧಾನಕ್ಕೆ ಎಸಗಿದ ಅಪಚಾರವಾಗಿದೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರಗಿಸಬೇಕು ಎಂದು ವಿದ್ಯಾರ್ಥಿ ಜನತಾ ದಳದ ಅಧ್ಯಕ್ಷ ಹಾಝಿಕ್ ಉಮರ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇರ್ಫಾನ್, ತೇಜಸ್ ನಾಯಕ್, ಸಿನಾನ್ ಆಗ್ರಹಿಸಿದ್ದಾರೆ.