×
Ad

​ಕೋಮುವಾದಿಗಳ ವಿರುದ್ದ ಕಠಿಣ ಕ್ರಮಕ್ಕೆ ಡಿವೈಎಫ್‌ಐ ಒತ್ತಾಯ

Update: 2017-06-14 17:11 IST

ಮಂಗಳೂರು, ಜೂ.14: ರಮಝಾನ್ ಪ್ರಾರಂಭವಾಗುತ್ತಿದ್ದಂತೆ ಕಲ್ಲಡ್ಕದಲ್ಲಿ ಕ್ಷುಲ್ಲಕ ಕಾರಣಗಳನ್ನು ನೆಪವಾಗಿಟ್ಟು ಕೊಂಡು ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸುವ, ಆ ಮೂಲಕ ಕೋಮು ಹಿಂಸೆಯನ್ನು ಪ್ರಚೋದಿಸಲು ಸಂಘಪರಿವಾರ ಪ್ರಯತ್ನಿಸುತ್ತಿದೆ. ಕಲ್ಲಡ್ಕವನ್ನು ಕೇಂದ್ರವಾಗಿಟ್ಟುಕೊಂಡು ಚುನಾವಣಾ ವರ್ಷದಲ್ಲಿ ಜಿಲ್ಲೆಯನ್ನು ಮತೀಯ ಧ್ರುವೀಕರಣದತ್ತ ಒಯ್ಯುವ ತನ್ನ ಎಂದಿನ ಗುಪ್ತ ಅಜೆಂಡಾವನ್ನು ಜಾರಿಗೊಳಿಸಲು ಸಂಘ ಪರಿವಾರ ಹೊಂದಿದೆ ಎಂದು ಡಿವೈಎಫ್‌ಐ ದ.ಕ. ಜಿಲ್ಲಾ ಸಮಿತಿ ಆರೋಪಿಸಿದೆ.

ನಿಷೇದಾಜ್ಞೆಯ ನಡುವೆಯೂ ಕ್ಷುಲ್ಲಕ ನೆಪಗಳನ್ನು ಸ್ಟೃಸಿಕೊಂಡು ಚೂರಿ ಇರಿತ, ಕಲ್ಲು, ಬಾಟ್ಲಿಗಳ ಎಸೆಯುವ ಮೂಲಕ ಕೋಮುಗಲಭೆ ಸೃಷ್ಟ್ಟಿಸಲು ಯತ್ನಿಸುವ ಇಂತಹ ಕೋಮುವಾದಿ ಹುನ್ನಾರಗಳನ್ನು ಡಿವೈಎಫ್‌ಐ ದ.ಕ. ಜಿಲ್ಲಾ ಸಮಿತಿ ಖಂಡಿಸಿದೆ ಮತ್ತು ಗಲಭೆ ಸೃಷ್ಟಿಸಲು ಪ್ರೇರೆಪಿಸಿರುವ ಸಂಘ ಪರಿವಾರದ ನಾಯಕರ ಮೇಲೆ ಕಠಿಣ ಕ್ರಮಕೈಗೊಳ್ಳಲು ಒತ್ತಾಯಿಸಿದೆ.

ಜಿಲ್ಲಾಡಳಿತ ಯಾವ ಮುಲಾಜಿಗೂ ಒಳಗಾಗದೆ ಗಲಭೆಕೋರರನ್ನು ಹತ್ತಿಕ್ಕಬೇಕು, ಗಲಭೆಗೆ ಕುಮ್ಮಕ್ಕು ನೀಡುತ್ತಿರುವ ಕಲ್ಲಡ್ಕ ಪ್ರಭಾಕರ್ ಭಟ್ ಮೇಲೆ ಕಠಿಣ ಕ್ರಮ ಜರುಗಿಸಬೇಕು ಎಂದು ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News