ವಿಶ್ವಕರ್ಮ ಸಭಾದ ಸಭೆ
Update: 2017-06-14 17:23 IST
ಮಂಗಳೂರು, ಜೂ.14: ದ.ಕ. ಶ್ರೀ ವಿಶ್ವಕರ್ಮ ಸಭಾ (ರಿ) ಕೊಯಂಬತ್ತೂರು ಇದರ 45ನೆ ವಾರ್ಷಿಕ ಮಹಾಸಭೆಯು ಕೊಯಂಬತ್ತೂರಿನ ಎಡೆಯಾರ್ ಸ್ಟ್ರೀಟ್‌ನಲ್ಲಿರುವ ಮರಾಠ ಭವನದಲ್ಲಿ ಇತ್ತೀಚೆಗೆ ಜರಗಿತು.
ನಿವೃತ್ತ ಪ್ರಾಂಶುಪಾಲ ಬೈಕಾಡಿ ಜನಾರ್ಧನ ಆಚಾರ್ ಅಧ್ಯಕ್ಷತೆ ವಹಿಸಿದ್ದರು. ಪಶುಪತಿ ಉಳ್ಳಾಲ ಅತಿಥಿಯಾಗಿ ಪಾಲ್ಗೊಂಡಿದ್ದರು. ವೇದಿಕೆಯಲ್ಲಿ ಸಭಾದ ಅಧ್ಯಕ್ಷ ಬಿ. ಯೋಗೇಂದ್ರ ರಾವ್, ಮಾಜಿ ಅಧ್ಯಕ್ಷ ಬಿ. ಯೋಗೀಶ್ ಹಾಗೂ ಮಹಿಳಾ ಸುತಿಯ ಅಧ್ಯಕ್ಷೆ ಸೌಮ್ಯಾ ವಸಂತ್ ಉಪಸ್ಥಿತರಿದ್ದರು.
ಕಾರ್ಯದರ್ಶಿ ಬಿ. ದಿನೇಶ್ ವರದಿ ವಾಚಿಸಿದರು. ಕೋಶಾಧಿಕಾರಿ ಯು.ಎಸ್. ಗಿರೀಶ್ ಲೆಕ್ಕ ಪತ್ರ ಮಂಡಿಸಿದರು. ಉಪಾಧ್ಯಕ್ಷ ಕೆ. ಆರ್. ಮಂಜುನಾಥ ಸ್ವಾಗತಿಸಿದರು. ಬಿ. ರಮೇಶ್ ರಾವ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದರು.