ಬಾರ್ ಅಸೋಶಿಯೇಶನ್ ನೂತನ ಅಧ್ಯಕ್ಷರಾಗಿ ನ್ಯಾಯವಾದಿ ರಾಜವರ್ಧನ ನಾಯ್ಕ ಆಯ್ಕೆ
Update: 2017-06-14 17:42 IST
ಭಟ್ಕಳ, ಜೂ. 14: ಭಟ್ಕಳ ಬಾರ್ ಅಸೋಶಿಯೇಶನ್ ನೂತನ ಅಧ್ಯಕ್ಷರಾಗಿ ನ್ಯಾಯವಾದಿ ರಾಜವರ್ಧನ ನಾಯ್ಕ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಇಲ್ಲಿನ ನ್ಯಾಯಾಲಯದ ಆವರಣದಲ್ಲಿನ ಬಾರ್ ಅಸೋಶಿಯೇಶನ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷರಾಗಿ ರಾಜವರ್ಧನ ನಾಯ್ಕ, ಉಪಾಧ್ಯಕ್ಷರಾಗಿ ಕಮಲಾಕರ ನಾಯ್ಕ, ಕಾರ್ಯದರ್ಶಿಯಾಗಿ ಪಾಂಡು ನಾಯ್ಕ, ಜೊತೆ ಕಾರ್ಯದರ್ಶಿಯಾಗಿ ದುರ್ಗಪ್ಪ ಸಿದ್ಧನಮನೆ ಆಯ್ಕೆಯಾಗಿದ್ದಾರೆ.
ಆಯ್ಕೆಯ ಸಭೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಧನ್ಯ ಕುಮಾರ್ ಜೈನ್, ಹಿರಿಯ ನ್ಯಾಯವಾದಿ ಆರ್.ಆರ್. ಶ್ರೇಷ್ಟಿ, ರಾಜೇಶ ನಾಯ್ಕ, ಕೆ.ಎಚ್.ನಾಯ್ಕ, ನಾಗರಾಜ ಇ.ಎಚ್., ಎಸ್. ಬಿ.ಬೊಮ್ಮಾಯಿ, ಎಂ.ಎಲ್.ನಾಯ್ಕ, ಸಿ.ಎಂ. ಭಟ್ಟ ಮುಂತಾದವರು ಉಪಸ್ಥಿತರಿದ್ದರು.