×
Ad

ಭಟ್ಕಳ: ವಿಶ್ವ ಬಾಲಕಾರ್ಮಿಕ ವಿರೋಧಿ ದಿನ

Update: 2017-06-14 17:59 IST

ಭಟ್ಕಳ, ಜೂ. 14: ನಗರದ ಶ್ರೀ ಗುರುಸುಧೀಂದ್ರ ಬಿ.ಬಿ.ಎ., ಬಿ.ಸಿ.ಎ. ಕಾಲೇಜು ಅಡಿಟೋರಿಯಂನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾನೂನು ಸೇವಾ ಸಮಿತಿ, ವಕೀಲರ ಸಂಘ ಭಟ್ಕಳ, ತಾಲೂಕಾ ಆಡಳಿತ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನಾ ಇಲಾಖೆ, ತಾಲೂಕಾ ಸಮಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಭಟ್ಕಳ ಇವುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ ಕಾರ್ಯಕ್ರಮ ನಡೆಯಿತು.

ವಕೀಲರ ಸಂಘದ ಅಧ್ಯಕ್ಷ ರಾಜವರ್ಧನ ಎನ್. ನಾಯ್ಕಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಭಟ್ಕಳ ತಾಲೂಕು ಕಾನೂನು ಸೇವಾ ಸಮಿತಿ ಚೇಯರ್ಮೆನ್ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ರಾಘವೇಂದ್ರ ಡಿ., ಮಾತನಾಡಿ ಅತ್ಯಂತ ಸಣ್ಣ ವಯಸ್ಸಿನಲ್ಲಿ ಬಾಲ ಕಾರ್ಮಿಕರಾಗುವುದನ್ನು ತಪ್ಪಿಸಿ ಅವರು ಮುಂದೆ ಉತ್ತಮ ನಾಗರೀಕರಾಗಬೇಕು ಎನ್ನುವ ಉದ್ದೇಶ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯನ್ನು ಆಚರಿಸುವುದಾಗಿದೆ.

ಬಾಲ ಕಾರ್ಮಿಕರಾಗಿಯೇ ದುಡಿಯುತ್ತ ಅವರ ಜೀವನ ಹಾಳಾಗಬಾರದು. ವಿದ್ಯಾಭ್ಯಾಸ ಸಿಗುವ ವಯಸ್ಸಿನಲ್ಲಿ ಸರಿಯಾದ ವಿದ್ಯೆ ಸಿಗಬೇಕು ವಿದ್ಯೆ ಕಲಿತು ಅವರೂ ಕೂಡಾ ಉತ್ತಮ ನಾಗರೀಕರಾಗಿ ಬಾಳಬೇಕೆನ್ನುವ ಕುರಿತು ಸಮಾಜದಲ್ಲಿಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿ ಹಳ್ಳಿ ಸೇರಿದಂತೆ ನಗರದಾದ್ಯಂತ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ವಿಶ್ವ ಬಾಲ ಕಾರ್ಮಿಕ ಪದ್ಧತಿ ಬಗ್ಗೆ ತಾಲೂಕಾ ಹಿರಿಯ ನ್ಯಾಯವಾದಿ ಆರ್. ಆರ್. ಶ್ರೇಷ್ಟಿ ಉಪನ್ಯಾಸ ನೀಡುತ್ತಾ ಕಾರ್ಮಿಕರಾಗಲು ಮುಖ್ಯ ಕಾರಣ ಬಡತನ, ಅಜ್ಞಾನ ಹಾಗೂ ಕುಟುಂಬ ನಿರ್ವಹಣೆ ಸಾಧ್ಯವಾಗದ ಸಂಧರ್ಭದಲ್ಲಿ ಮಕ್ಕಳನ್ನು ಕೆಲಸಕ್ಕೆ ಸೇರಿಸುವ ಕಾರ್ಯ ಪಾಲಕರು ಮಾಡುತ್ತಾರೆ. ಆದರೆ ಈಗ ಶಿಕ್ಷಣ ನೀತಿ ಬದಲಾಗಿದ್ದು, 14ನೇ ವರ್ಷದತನ ಕಡ್ಡಾಯ ಶಿಕ್ಷಣ ದೊರೆಯಬೇಕು ಶಿಕ್ಷಣದಿಂದ ಯಾವೊಬ್ಬ ಮಗು ಸಹ ವಂಚಿತವಾಗಬಾರದು ಎಂಬ ಕಾನೂನು ಬಾಲ ಕಾರ್ಮಿಕ ಪದ್ದತಿಯನ್ನು ನಿಲ್ಲಿಸಿದೆ ಎಂದು ವಿವರಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ವಿಶ್ವ ಬಾಲಕಾರ್ಮಿಕ ಪ್ರಬಂದ ಸ್ಪರ್ದೆಯ ವಿಜೇತ ವಿಧ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಹಾಯಕ ಆಯುಕ್ತ ಎಮ್.ಎನ್. ಮಂಜುನಾಥ, ತಹಶೀಲ್ದಾರ್ ವಿ.ಎನ್. ಬಾಡಕರ್, ಸಹಾಯಕ ಸರ್ಕಾರಿ ಅಭಿಯೋಜಕಿ ಇಂದಿರಾ ನಾಯ್ಕ, ಪ್ರಧಾನ ಸಿವಿಲ್ ನ್ಯಾಯಾಧೀಶ ಹನುಮಂತರಾವ್‌ ಆರ್.ಕುಲಕರ್ಣಿ, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಪಟಗಾರ, ವಕಿಲರುಗಳಾದ ಜಿ.ಟಿ. ನಾಯ್ಕ, ಕಮಲಾಕರ ಭೈರುಮನೆ, ದುರ್ಗಪ್ಪ ಸಿದ್ದನಮನೆ, ಆರ್.ಜಿ.ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News