ಕನ್ನಡ ಸಂಘದಲ್ಲಿ ಉಪನ್ಯಾಸ
Update: 2017-06-14 18:29 IST
ಮೂಡುಬಿದಿರೆ,ಜೂ.14: ಕಾಂತಾವರ ಕನ್ನಡ ಸಂಘದಲ್ಲಿ ರವಿವಾರ ನಡೆದ ತಿಂಗಳ ನುಡಿನಮನ ಉಪನ್ಯಾಸ ಕಾರ್ಯಕ್ರಮದಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದ ’ಆದಿಕವಿ ಪಂಪ ಅಧ್ಯಯನ ಪೀಠ’ದ ಸಮನ್ವಯಾಧಿಕಾರಿ ಡಾ. ಶಾಂತಿನಾಥ ಎಂ. ದಿಬ್ಬದ್ ಅವರು ಪಂಪಭಾರತ ಮತ್ತು ಗದಾಯುದ್ಧ ಒಂದು ತೌಲನಿಕ ನೋಟ’ ಎಂಬ ವಿಷಯದ ಕುರಿತು ಮಾತನಾಡಿದರು.
ಬಾಬು ಶೆಟ್ಟಿ ನಾರಾವಿಯವರು ಕಾರ್ಯಕ್ರಮ ನಿರ್ವಹಿಸಿದರು. ಡಾ.ನಾ.ಮೊಗಸಾಲೆಯವರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ ಸದಾನಂದ ನಾರಾವಿ ವಂದಿಸಿದರು.