ಸಂಗೀತ ಕಲಿಕೆಯಿಂದ ವಿದ್ಯಾರ್ಥಿಗಳ ಬೌದ್ಧಿಕ ಸಾಮರ್ಥ್ಯ ಹೆಚ್ಚುತ್ತದೆ: ಸತೀಶ್ ಕುಮಾರ್ ರೈ
ಪುತ್ತೂರು,ಜೂ.14: ವಿಭಕ್ತ ಕುಟುಂಬ, ಹಾಗೂ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ಬೌದ್ಧಿಕ ಕ್ಷಮತೆಯನ್ನು ಅಂಕಗಳಿಂದ ಅಳೆಯುವ ಸನ್ನಿವೇಶ ಬಂದಿದೆ. ಆದರೆ ವಿದ್ಯಾರ್ಥಿಗಳು ತಮ್ಮನ್ನು ಸಂಗೀತ ಕಲಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಅವರ ಬೌದ್ಧಿಕ ಸಾಮರ್ಥ್ಯ ಹೆಚ್ಚುತ್ತದೆ ಎಂದು ತೆಂಕಿಲದ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಸತೀಶ್ ಕುಮಾರ್ ರೈ ಹೇಳಿದರು.
ಅವರು ಶ್ರೀ ಮಹಾಲಿಂಗೇಶ್ವರ ದೇವಳದ ನಟರಾಟ ವೇದಿಕೆಯಲ್ಲಿ ಸಾಧನಾ ಸಂಗೀತ ವಿದ್ಯಾಲಯದ ಆಶ್ರಯದಲ್ಲಿ ನಡೆಯುತ್ತಿರುವ ಸ್ವರಮಾಲಾ -34 ತಿಂಗಳ ಸರಣಿ ಸಂಗೀತ ಸೇವಾ ಕಾರ್ಯಕ್ರಮದಲ್ಲಿ ಬೂಧವಾರ ಅತಿಥಿಯಾಗಿ ಮಾತನಾಡಿದರು.
ಕೇವಲ ಅಂಕ ಗಳಿಕೆಯೇ ಜೀವನದ ಗುರಿ ಎಂದು ಭಾವಿತವಾದ ಇಂದಿನ ಜನತೆಯಲ್ಲಿ ಲಲಿತಕಲೆಗಳು ಆಟೋಟ, ದೈಹಿಕ ಕ್ಷಮತೆಯನ್ನು ಹೆಚ್ಚಿಸುವಂತಹ ಪಠ್ಯೇತರ ವಿಚಾರಗಳಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ. ಆದರೂ ಸಂಗೀತವನ್ನು ಕಲಿಯುವ ವಿದ್ಯಾರ್ಥಿಗಳು ಕಲಿಕೆಯಲ್ಲೂ ಮುಂಚೂಣಿಯಲ್ಲಿರುತ್ತಾರೆ. ಏಕೆಂದರೆ ಸಂಗೀತ ಮತ್ತು ಕಲಿಕೆಯು ಒಂದಕ್ಕೊಂದು ಪೂರಕ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಾಧನಾ ಸಂಗೀತ ವಿದ್ಯಾಲಯದ ಗುರುಗಳಾದ ವಿದುಷಿ ಸುಚಿತ್ರಾ ಹೊಳ್ಳ ಅವರು ಮಾತನಾಡಿ ಧ್ವನಿಯ ಗುಣಮಟ್ಟದ ಮೇಲೆ ಹಾಡುವ ಶೈಲಿ ನಿರ್ಧಾರವಾಗುತ್ತದೆ. ಸಂಗೀತ ಕಲಿಕೆಗಳಿಂದ ತ್ಯಾಗ ಮುಖ್ಯ. ನಿರಂತರ ಸಂಗೀತ ಅಭ್ಯಾಸದಿಂದ ಸುಲಭ, ಸುಲಲಿತವಾಗಿ ಹಾಡಲು ಸಾಧ್ಯ. ಸಂಗೀತ ವಿದ್ಯಾರ್ಥಿಗಳು ತಮ್ಮ ಕಂಠವನ್ನು ಮಗುವನ್ನು ಸಾಕಿದ ರೀತಿಯಲ್ಲಿ ಕಾಪಿಟ್ಟುಕೊಳ್ಳಬೇಕು ಎಂದು ಹೇಳಿದರು. ಸ್ವರಮಾಲಾ ಸಮಿತಿಯ ಜತೆ ಕಾರ್ಯದರ್ಶಿ ಮಹೇಶ್ವರ ಭಟ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪಂಚಮಿ ಅತಿಥಿಗಳ ಪರಿಚಯ ಮಾಡಿಕೊಟ್ಟರು. ವೈಷ್ಣವಿ ಕೆ.ಬಿ. ಸ್ವಾಗತಿಸಿದರು. ಸಂಹಿತಾ ವಂದಿಸಿದರು. ಪ್ರಿಯಂವದಾ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ತೇಜ ಚಿನ್ಮಯ ಹೊಳ್ಳ. ಮೈಥಿಲೀ ದೇವಿ ಮತ್ತು ನಂದಿನಿ.ಎಸ್ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಪಕ್ಕವಾದ್ಯದಲ್ಲಿ ವಿದ್ವಾನ್‌ವೇದುಲ ಶ್ರೀಕಿರಣ್,ಬೆಂಗಳೂರು ವಯೋಲಿನ್ ವಾದನದಲ್ಲಿ ವಿದ್ವಾನ್ ಪನ್ನಗ ಶರ್ಮನ್ ಶೃಂಗೇರಿ ಮೃದಂವಾದನದಲ್ಲಿ ಸಹಕರಿಸಿದರು ಫೋಟೋ:14ಪಿಟಿಆರ್- ಸ್ವರಮಾಲಾ