×
Ad

ಸೇತುವೆಯಿಂದ ನದಿಗೆ ಬಿದ್ದ ಬಸ್: 8 ಪ್ರಯಾಣಿಕರು ಮೃತ್ಯು

Update: 2017-06-14 18:48 IST

ಉತ್ತರಪ್ರದೇಶ, ಜೂ.14: ಸೇತುವೆಯಿಂದ ಬಸ್ಸೊಂದು ನದಿಗೆ ಬಿದ್ದ ಪರಿಣಾಮ 8 ಮಂದಿ ಮೃತಪಟ್ಟು 30ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡ ಘಟನೆ ಜೌನ್ ಪುರ್-ಅಲಹಾಬಾದ್ ಹೆದ್ದಾರಿಯ ಬಾರ್ಗುದಾರ್ ಗ್ರಾಮದಲ್ಲಿ ನಡೆದಿದೆ.

ಉತ್ತರ ಪ್ರದೇಶ ಸಾರಿಗೆ ಸಂಸ್ಥೆಯ ಬಸ್ ಅಲಹಾಬಾದ್ ನಿಂದ ಜೌನ್ ಪುರ್ ಗೆ ಹೋಗುತ್ತಿದ್ದು, ಈ ಸಂದರ್ಭ ಸೇತುವೆ ಸಮೀಪಿಸುತ್ತಲೇ ಚಾಲಕನ ನಿಯಂತ್ರಣ ಕಳೆದುಕೊಂಡಿದ್ದಾನೆ. ಪರಿಣಾಮ ಬಸ್ ನದಿಗೆ ಬಿದ್ದಿದೆ.

ಅಪಘಾತದ ಪರಿಣಾಮ 8 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ. ಅಪಘಾತದ ತೀವ್ರತೆಗೆ ಬಸ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಹಲವರು ಬಸ್ ನೊಳಗೆ ಸಿಲುಕಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News