ಭಾರತದ ರಿಫಾತ್ ಶಾರುಖ್ ನಿರ್ಮಿಸಿದ ಜಗತ್ತಿನ ಅತ್ಯಂತ ಹಗುರ ಉಪಗ್ರಹ ಜೂ.22 ಕ್ಕೆ ನಾಸಾದಿಂದ ಬಾಹ್ಯಾಕಾಶಕ್ಕೆ

Update: 2017-06-14 14:43 GMT

ಹೊಸದಿಲ್ಲಿ, ಜೂ.14: ಜಗತ್ತಿನ ಅತಿ ಹಗುರದ ಉಪಗ್ರಹವೊಂದನ್ನುಅಭಿವೃದ್ಧಿಪಡಿಸಿ ವಿಜ್ಞಾನಿಗಳ ಹುಬ್ಬೇರಿಸಿದ್ದ ಭಾರತದ 18 ವರ್ಷದ ರಿಫಾತ್ ಶಾರುಖ್ ರ “ಕಲಾಮ್ ಸ್ಯಾಟ್” (ಮಾಜಿ ರಾಷ್ಟ್ರಪತಿ ದಿವಂಗತ ಎ.ಪಿ.ಜೆ. ಅಬ್ದುಲ್ ಕಲಾಂ ಸ್ಮರಣಾರ್ಥ) ಜೂನ್ 22ರಂದು ನಾಸಾದಿಂದ ಬಾಹ್ಯಾಕಾಶಕ್ಕೆ ಜಿಗಿಯಲಿದೆ.

ರಿಫಾತ್ ನಿರ್ಮಿಸಿರುವ 64 ಗ್ರಾಂ ತೂಗುವ ಈ ಉಪಗ್ರಹ "ಐ ಡೂಡಲ್" ಆಯೋಜಿಸಿದ್ದ ಯುವ ಅನ್ವೇಷಕರ ಸ್ಪರ್ಧೆಯಲ್ಲಿ ಪ್ರಶಸ್ತಿ ಗಳಿಸಿತ್ತು. 3ಡಿ ಪ್ರಿಂಟೆಡ್ ಕಾರ್ಬನ್ ಫೈಬರ್ ಮೂಲಕ ಈ ಉಪಗ್ರಹವನ್ನು ರಿಫಾತ್ ಅಭಿವೃದ್ಧಿಪಡಿಸಿದ್ದರು. 4 ಮೀಟರ್ ಕ್ಯೂಬ್ ನಲ್ಲಿ ನಿಲ್ಲುವಂತೆ 64 ಗ್ರಾಂ ಗಿಂತ ಹೆಚ್ಚು ತೂಕವಿಲ್ಲದ ಡಿವೈಸನ್ನು ತಯಾರುವಂತೆ ಜಗತ್ತಿನ ವಿವಿಧ ದೇಶಗಳಿಂದ ಭಾಗವಹಿಸಿದ್ದ ಯುವ ವಿಜ್ಞಾನಿಗಳಿಗೆ ಸವಾಲು ನೀಡಲಾಗಿತ್ತು. ಸ್ಪೇಸ್ ಕಿಡ್ಸ್ ಇಂಡಿಯಾ ಸಂಸ್ಥೆಯ ಆರ್ಥಿಕ ನೆರವಿನೊಂದಿಗೆ ರಿಫಾತ್ ಅಭಿವೃದ್ಧಿಪಡಿಸಿದ ಉಪಗ್ರಹ ಪ್ರಶಸ್ತಿ ಗಳಿಸಿತು.

ಡಿವೈಸನ್ನು ರಚಿಸುವುದು ಸವಾಲಾಗಿರಲಿಲ್ಲ. ಆದರೆ ಈ ಪ್ರಯೋಗವನ್ನು ಬಾಹ್ಯಾಕಾಶದಲ್ಲಿ ಉಪಯೋಗಿಸುವುದು ನಿಜಕ್ಕೂ ಸವಾಲು ಎನ್ನುತ್ತಾರೆ ರಿಫಾತ್ ಶಾರೂಖ್. ನಾಸಾದ ವಾಲೂಪ್ಸ್ ಐಲ್ಯಾಂಡ್ ಫೆಸಿಲಿಟಿ ಜೂನ್ 22ರಂದು ಉಪ-ಕಕ್ಷೆಯ ವಿಮಾನದಲ್ಲಿ ಉಡ್ಡಯನ ನಡೆಸಲಿದೆ. ಸುಮಾರು 12 ನಿಮಿಷಗಳ ಕಾಲ ಸೂಕ್ಷ್ಮ ಗುರುತ್ವ ಪರಿಸರದಲ್ಲಿ ಈ ಉಪಗ್ರಹ ಕಾರ್ಯ ನಿರ್ವಹಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News