×
Ad

ಈಗ ನೋಡಿ ಶನಿ; ಸೌಂದರ್ಯದ ಖನಿ!

Update: 2017-06-14 20:33 IST

ಉಡುಪಿ, ಜೂ.14: ಈ ತಿಂಗಳು ಸುಂದರ ಬಳೆಗಳ ಶನಿಗ್ರಹ ದೂರದರ್ಶಕದ ಮೂಲಕ ಇನ್ನೂ ಸುಂದರವಾಗಿ, ದೊಡ್ಡದಾಗಿ ಕಾಣಿಸಲಿದೆ. ಇದರೊಂದಿಗೆ ಜೂ.15ರಂದು ವರ್ಷಕ್ಕೊಮ್ಮೆ ನಡೆಯುವ ಶನಿಗ್ರಹದ ಓಪೋಸಿಷನ್ ನಡೆಯಲಿದೆ. ಇದನ್ನು ಶನಿಗ್ರಹದ ಹುಣ್ಣಿಮೆ ಎಂದು ಕರೆಯಬಹುದು.

ಹೀಗೆ ಬಂದಾಗ ಸೂರ್ಯ ಶನಿಗ್ರಹಗಳ ನಡುವೆ ಭೂಮಿ ಬರಲಿದೆ. ಆಗ ಶನಿಗ್ರಹ ಭೂಮಿಗೆ ಸುಮಾರು 15 ಕೋಟಿ ಕಿ.ಮೀ. ಸಮೀಪದಲ್ಲಿ ಕಾಣಿಸಲಿದೆ. ಹೀಗೆ ಬಂದಾಗ ಸೂರ್ಯ ಶನಿಗ್ರಹಗಳ ನಡುವೆ ಭೂಮಿ ಬರಲಿದೆ. ಆಗಶನಿಗ್ರಹೂಮಿಗೆ ಸುಮಾರು 15 ಕೋಟಿ ಕಿ.ಮೀ. ಸಮೀಪದಲ್ಲಿ ಕಾಣಿಸಲಿದೆ. ಸೂರ್ಯ ಮತ್ತು ಶನಿಗ್ರಹದ ಸರಾಸರಿ ದೂರ 145 ಕೋಟಿ ಕಿ.ಮೀ. ಸೂರ್ಯ ಮತ್ತು ಭೂಮಿಯ ಸರಾಸರಿ ದೂರ 15 ಕೋಟಿ ಕಿ.ಮೀ. ಹಾಗಾಗಿ ವರ್ಷಕ್ಕೊಮ್ಮೆ ಶನಿಗ್ರಹ ಭೂಮಿಯಿಂದ ದೂರವೆಂದರೆ ಸುಮಾರು 160 ಕೋಟಿ ಕಿ.ಮೀ, ಹಾಗೆಯೇ ಸಮೀಪವೆಂದರೆ ಸುಮಾರು 130 ಕೋಟಿ ಕಿ.ಮೀ. ದೂರದಲ್ಲಿ ಕಾಣಿಸುತ್ತದೆ. ಹತ್ತಿರ ಬಂದಾಗ ದೊಡ್ಡದಾಗಿ ಕಾಣಿಸಲಿದೆ. ಹೀಗಾಗಿ ಈ ತಿಂಗಳು ದೊಡ್ಡದಾಗಿಯೂ ಹಾಗೆಯೇ ವಿಸ್ತಾರವಾದ ಬಳೆಗಳಿಂದಲೂ ಶನಿಗ್ರಹವು ಶೋಭಿಸಲಿದೆ.

ಆಕಾಶ ಶುಭ್ರವಾಗಿದ್ದಲ್ಲಿ ಸೌಂದರ್ಯದ ಖನಿ ಶನಿಗ್ರಹವನ್ನು ನೋಡಲು ಮರೆಯಬೇಡಿ. ಈ ವಾರ ಪಶ್ಚಿಮದಲ್ಲಿ ಸೂರ್ಯಾಸ್ತವಾದೊಡನೆ ಪೂರ್ವದಲ್ಲಿ ಶನಿಗ್ರಹದ ಉದಯವಾಗಲಿದೆ ಎಂದು ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News