×
Ad

ವಾಹನ ಕಳವು ಪ್ರಕರಣ: ಆರೋಪಿಗಳ ಸೆರೆ

Update: 2017-06-14 22:20 IST

ದಾವಣಗೆರೆ, ಜೂ. 14: ನಗರದ ನಾಲ್ಕು ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದಿದ್ದ ದ್ವಿಚಕ್ರ ವಾಹನಗಳ ಕಳವು ಪ್ರಕರಣವನ್ನು ಭೇದಿಸಿರುವ ಪೊಲೀಸರು 15 ವರ್ಷದ ಬಾಲಕ ಸೇರಿದಂತೆ ಇಬ್ಬರನ್ನು ಬಂಧಿಸಿ 22 ಬೈಕ್ ಮತ್ತು ಒಂದು ಇಂಡಿಕಾ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್ ಗುಳೇದ್ ತಿಳಿಸಿದರು.

ಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಬೀಡಿ ಲೇ ಔಟ್‍ನ್ ವಾಸಿ ಸದ್ದಾಂ (24) ಮತ್ತು 15 ವರ್ಷದ ಬಾಲಕನೊಬ್ಬನನ್ನು ಪ್ರಕರಣಗಳಿಗೆ ಸಂಬಂಧಿಸಿದಂತೆ ಬಂಧಿಸಲಾಗಿದೆ.

ಬಡಾವಣೆ ಠಾಣಾ ವ್ಯಾಪ್ತಿಯಲ್ಲಿ 3, ಕೆಟಿಜೆ ನಗರ ಠಾಣಾ ವ್ಯಾಪ್ತಿಯಲ್ಲಿ 4 ಮತ್ತು ಗಾಂಧೀನಗರ, ಬಸವನಗರ ಠಾಣಾ ವ್ಯಾಪ್ತಿಹಗಳಲ್ಲಿ ತಲಾ 1 ಬೈಕ್ ಕಳವು ಪ್ರಕರಗಳ ಪತ್ತೆ ಸಂಬಂಧ ಡಿವೈಎಸ್‍ಪಿ ಅಶೋಕ್ ಕುಮಾರ್ ಸಿಪಿಐ ಉಮೇಶ್ ಅಜಾದ್ ನಗರ ಪಿಎಸ್‍ಐ ಶಿವರುದ್ರಪ್ಪ ಮೇಟಿ ಅವರನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು. ಈ ತಂಡ ನಗರದ ಬಿಡಿ ಲೇಔಟ್‍ನ ಸದ್ದಾಂ ಮತ್ತು ಆತನ ಸಹಚರ 15 ವರ್ಷದ ಬಾಲಕನನ್ನು ಬಂಧಿಸಿ ಬುಲೆಟ ಸೇರಿದಂತೆ ವಿವಿಧ ಬಗೆಯ 22 ಬೈಕುಗಳು ಹಾಗೂ ಒಂದು ಇಂಡಿಕಾ ಕಾರನ್ನು ವಶಪಡಿಸಿಕೊಂಡಿದ್ದಾರೆ. ಇದೀಗ ವಶಪಡಿಸಿಕೊಂಡಿರುವ ವಾಹನಗಳ ಮೌಲ್ಯ 12 ಲಕ್ಷದ 20 ಸಾವಿರ ರೂ. ಎಂದು ಅವರು ಮಾಹಿತಿ ನೀಡಿದರು.
 

ಕಳವು ಮಾಡಿದ ಬೈಕ್‍ಗಳನ್ನು ಈ ಇಬ್ಬರು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು. 1.20 ಲಕ್ಷ ಬೆಲೆಯ ಬುಲೆಟ್ ಅನ್ನು ಕೇವಲ 15ರಿಂದ 20 ಸಾವಿರ ರೂ. ಗೆ ಮಾರಾಟ ಮಾಡುತ್ತಿದ್ದ ಈ ತಂಡ ಕಳವುಗೈದ ಬೈಕುಗಳ ನಂಬರ್‍ಗಳನ್ನು ಬದಲಿಸುತ್ತಿದ್ದರು ಎಂದು ತಿಳಿದುಬಂದಿದೆ.

ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಇಲಾಖೆಯ ಎಲ್ಲ ಸಿಬ್ಬಂದಿಗಳಿಗೆ ಬಹುಮಾನ ನೀಡಲಾಗಿದೆ ಎಂದು ಹೇಳಿದರು.
ಗೋಷ್ಠಿ ಯಲ್ಲಿ  ಡಿವೈಎಸ್‍ಪಿ ಅಶೋಕ್ ಕುಮಾರ್, ಸಿಪಿಐ ಉಮೇಶ್, ಅಜಾದ್ ನಗರ ಪಿಎಸ್‍ಐ ಶಿವರುದ್ರಪ್ಪ ಮೇಟಿ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News