ಯುವಕನಿಗೆ ಸೋಡಾ ಬಾಟ್ಲಿಯಿಂದ ಹಲ್ಲೆ
Update: 2017-06-14 22:41 IST
ಮಂಗಳೂರು, ಜೂ. 14: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಮುಚ್ಚೂರು ಎಂಬಲ್ಲಿ ಯುವಕನೋರ್ವನ ಮೇಲೆ ಗುಂಪೊಂದು ಸೋಡಾ ಬಾಟ್ಲಿಯಿಂದ ಹಲ್ಲೆ ನಡೆಸಿದ ಘಟನೆ ಬುಧವಾರ ಸಂಜೆ ನಡೆದಿದೆ.
ಕಂದಾವರದ ನಿವಾಸಿ ಮುಹಮ್ಮದ್ ಆಸಿಫ್ ಹಲ್ಲೆಗೊಳಗಾದವರು ಎಂದು ಗುರುತಿಸಲಾಗಿದೆ.
ಬುಧವಾರ ಸಂಜೆ ಗಂಜಿಮಠದ ಸಮೀಪ ವಾಹನಕ್ಕೆ ಹೊಯ್ಗೆ ತುಂಬಿಸುತ್ತಿದ್ದ ಸಂದರ್ಭದಲ್ಲಿ ಸುಮಾರು 10 ರಿಂದ 15 ಮಂದಿಯ ತಂಡ ಅಲ್ಲಿಗೆ ಆಗಮಿಸಿ 25,000 ರೂ. ಕೊಡುವಂತೆ ಬೇಡಿಕೆ ಇಟ್ಟಿದ್ದಾರೆಂದು ಆರೋಪಿಸಲಾಗಿದೆ. ಈ ಸಂದರ್ಭದಲ್ಲಿ ಆರೋಪಿಗಳು ಮತ್ತು ಆಸಿಫ್ ನಡುವೆ ಮಾತಿಗೆ ಮಾತು ಬೆಳೆದೆ ಹಲ್ಲೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.