ಬೀದಿಬದಿಯಲ್ಲಿ ಮಲಗಿದ್ದ ನಿರ್ವಸಿತ ವೃದ್ಧನಿಗೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ದುಷ್ಕರ್ಮಿಗಳು

Update: 2017-06-14 17:36 GMT

ಚೆನ್ನೈ, ಜೂ.14: ಬೀದಿಬದಿಯಲ್ಲಿ ಮಲಗಿದ್ದ ನಿರ್ವಸಿತ ವೃದ್ಧರೋರ್ವರಿಗೆ ಕುಡುಕರ ಗುಂಪೊಂದು ಹಲ್ಲೆ ನಡೆಸಿ ಬೆಂಕಿ ಹಚ್ಚಿದ ಘಟನೆ ಚೆನ್ನೈನ  ಕೋಡಂಬಕ್ಕಂನಲ್ಲಿ ನಡೆದಿದೆ.

50 ವರ್ಷದ ಜಾಫರ್ ಎಂಬ ವೃದ್ಧರ ಮೇಲೆ ದೌರ್ಜನ್ಯ ಎಸಗಿದ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ದುಷ್ಕರ್ಮಿಗಳ ವಿರುದ್ಧ ಭಾರೀ ಆಕ್ರೋಶಗಳು ವ್ಯಕ್ತವಾಗುತ್ತಿವೆ,

ರಂಗರಾಜಪುರಂನ ಇಂಡಿಯನ್ ಬ್ಯಾಂಕ್ ಸಮೀಪದ ರಸ್ತೆ ಬದಿ ಜಾಫರ್ ಮಲಗಿದ್ದರು. ಈ ಸಂದರ್ಭ ಅಲ್ಲಿಗೆ ಆಗಮಿಸಿದ ಕುಡುಕ ಯುವಕರ ಗುಂಪು ಬೆಂಕಿ ಹಚ್ಚಿದ್ದಲ್ಲದೆ, ಪೈಪ್ ಗಳಿಂದ ಹಲ್ಲೆ ನಡೆಸಿದೆ.

ವೃದ್ಧರ ಮೇಲೆ ಹಲ್ಲೆ ನಡೆಸಿದ ಕಿಡಿಗೇಡಿಗಳನ್ನು ಪೊಲೀಸರು ಬಂಧಿಸಿದ್ದು, ಶ್ಯಾಮ್, ಪುಗಳೆಂದಿ ರಾಜೇಶ್ ಹಾಗೂ ಮತ್ತೋರ್ವ ಅಪ್ರಾಪ್ತ ಎಂದು ಗುರುತಿಸಲಾಗಿದೆ. ಈ ಬಗ್ಗೆ ತಪ್ಪೊಪ್ಪಿಕೊಂಡಿರುವ ಯುವಕರು ಕುಡಿತದ ಅಮಲಿನಲ್ಲಿ ಈ ದುಷ್ಕೃತ್ಯ ೆಸಗಿರುವುದಾಗಿ ತಿಳಿಸಿದ್ದಾರೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News