×
Ad

ಜೂ.16: ಲೇಡಿಹಿಲ್‌ನಲ್ಲಿ ನೂತನ ‘ಎಸ್.ಎಲ್.ಶೇಟ್ ಡೈಮಂಡ್ ಹೌಸ್’ ಉದ್ಘಾಟನೆ

Update: 2017-06-14 23:37 IST

ಮಂಗಳೂರು. ಜೂ,14: ನಗರದ ಲೇಡಿ ಹಿಲ್ ಬಳಿ ಎಂ. ರವೀಂದ್ರ ಶೇಟ್ ಮತ್ತು ಪುತ್ರರ ನೇತೃತ್ವದ ‘ಎಸ್.ಎಲ್.ಶೆಟ್ ಡೈಮಂಡ್ ಹೌಸ್’ ಜೂನ್ 16ರಂದು ಸ್ವರ್ಣಾಭರಣ ಮತ್ತು ವಜ್ರಾಭರಣದ ನೂತನ ಮಳಿಗೆ ‘ಎಸ್.ಎಲ್.ಶೇಟ್ ಡೈಮಂಡ್ ಹೌಸ್ ’ ಉದ್ಘಾಟನೆಗೊಳ್ಳಲಿದೆ.

ಸೋದೆ ವಾದಿ ರಾಜ ಮಠದ ಶ್ರೀ ವಲ್ಲಭ ತೀರ್ಥ ಸ್ವಾಮಿ ಆರ್ಶೀವಚನಗೈಯಲಿದ್ದಾರೆ. ನೂತನ ಮಳಿಗೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಹರ್ಷೇಂದ್ರ ಕುಮಾರ್ ಮತ್ತು ಸುಪ್ರೀಯ ಹರ್ಷೇಂದ್ರ ಕುಮಾರ್ ಉದ್ಘಾಟಿಸಲಿದ್ದಾರೆ.

ಮೊದಲ ಮಹಡಿ ಮತ್ತು ಬೆಳ್ಳಿ ವಿಭಾಗವನ್ನು ಶ್ರೀ ಕ್ಷೆತ್ರ ಹೊರನಾಡಿನ ಧರ್ಮಕರ್ತರಾದ ಡಾ.ಭೀಮೇಶ್ವರ ಜೋಶಿ ಮತ್ತು ರಾಜಲಕ್ಷ್ಮೀ ಜೋಶಿ ಉದ್ಘಾಟಿಸಲಿದ್ದಾರೆ. ವಜ್ರಾಭರಣ ವಿಭಾಗವನ್ನು ಜನತಾ ಕನಸ್ಟ್ರಕ್ಷನ್ ಸಂಸ್ಥೆಯ ಆಡಳಿತ ನಿರ್ದೇಶಕ ರಮೇಶ್ ಕುಮಾರ್ ಮತ್ತು ಅವರ ಪತ್ನಿ ಊರ್ಮಿಳಾ ರಮೇಶ್ ಕುಮಾರ್ ನೆರವೇರಿಸಲಿದ್ದಾರೆ.

ಸಮಾರಂಭದಲ್ಲಿ ಗೌರವಾನ್ವಿತ ಅತಿಥಿಯಾಗಿ ಪದ್ಮಾ ರಘುನಾಥ ಶೇಟ್ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಎಂ.ರವೀಂದ್ರ ಶೇಟ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಎಸ್.ಎಲ್.ಶೇಟ್ ಡೈಮಂಡ್ ಹೌಸ್‌ನ ಪಾಲುದಾರರಾದ ಎಂ.ಶರತ್ ಶೇಟ್, ಎಂ.ಸುಮಂತ್ ಶೇಟ್, ಎಂ.ಪ್ರಸಾದ್ ಶೇಟ್, ಎಂ.ಪ್ರಸನ್ನ ಶೇಟ್ ಮತ್ತು ಸಂಸ್ಥೆಯ ಹಿತೈಷಿ ಸುಧಾಕರ ರಾವ್ ಪೇಜಾವರ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News