ರಾಜ್ಯದಲ್ಲಿ 250 ಗೇರು ಕಾರ್ಖಾನೆ ನೋಂದಣಿ: ಸಚಿವ ರೈ
ಮಂಗಳೂರು, ಜೂ.15: ರಾಜ್ಯದಲ್ಲಿ 250 ಗೇರು ಕಾರ್ಖಾನೆಗಳು ನೋಂದಣಿಯಾಗಿದೆ ಎಂದು ರಾಜ್ಯ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ರಮಾನಾಥ ರೈ ಹೇಳಿದರು.
ವಿಧಾನ ಮಂಡಲ ಅಧಿವೇಶನದಲ್ಲಿ ವಿಧಾನ ಪರಿಷತ್ ಸರಕಾರಿ ಮುಖ್ಯ ಸಚೇತಕ ಐವನ್ ಡಿಸೋಜರ ಪ್ರಶ್ನೆಗೆ ಅವರು ಉತ್ತರಿಸಿರು.
ರಾಜ್ಯ ಗೇರು ಅಭಿವೃದ್ಧಿ ನಿಗಮಕ್ಕೆ ಸರಕಾರದಿಂದ 2017-18ನೆ ಸಾಲಿನಲ್ಲಿ ಯಾವುದೇ ಹಣ ಮೀಸಲಾಗಿಟ್ಟಿಲ್ಲ. ಆದುದರಿಂದ ಯಾವುದೇ ಯೋಜನೆ ಕೈಗೊಂಡಿಲ್ಲ. ಗೇರು ಅಭಿವೃದ್ಧಿ ನಿಗಮದಲ್ಲಿ 25,632.62 ಹೆಕ್ಟೇರ್ ಕೃಷಿ ಭೂಮಿ ಇದ್ದು 1979 ಮತ್ತು 1993 ರಲ್ಲಿ ಸರಕಾರದಿಂದ 12.724.43 ಹೆಕ್ಟೇರು ಪ್ರದೇಶವನ್ನು ಈಕ್ವಿಟಿಯಾಗಿ ಮತ್ತು 12,908.19 ಹೆಕ್ಟೇರು ಲೀಸ್ ಆಗಿ ಹಸ್ತಾಂತರಿಸಲಾಗಿದೆ ಎಂದರು.
1992-93ರಿಂದ 2016-17ನೇ ಸಾಲಿಗೆ 12,480 ಹೆಕ್ಟೇರು ಖಾಲಿ ಇರುವ ಪ್ರದೇಶದಲ್ಲಿ ಉತ್ತಮ ತಳಿಯ ಗೇರು ಗಿಡ ನೆಡಲಾಗಿದೆ. 2017-18ನೇ ಸಾಲಿಗೆ 250 ಹೆಕ್ಟೇರು ಪ್ರದೇಶದಲ್ಲಿ ಉತ್ತಮ ತಳಿಯ ಗೇರು ಗಿಡ ಬೆಳೆಸಲು ಉದ್ದೇಶಿಸಲಾಗಿದೆ ಎಂದರು.