×
Ad

ಜೂ.16: ಜಿಎಸ್‌ಟಿ ಹೆಲ್ಪ್‌ಡೆಸ್ಕ್ ಉದ್ಘಾಟನೆ

Update: 2017-06-15 18:34 IST

ಉಡುಪಿ, ಜೂ.15: ಭಾರತೀಯ ಲೆಕ್ಕಪರಿಶೋಧಕರುಗಳ ಸಂಸ್ಥೆ(ಐಸಿಎಐ) ಯ ಪರೋಕ್ಷ ತೆರಿಗೆ ಕಮಿಟಿಯ ನಿರ್ದೇಶನದಂತೆ ಐಸಿಎಐ ಉಡುಪಿ ಶಾಖೆ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ)ಕುರಿತು ಮಾಹಿತಿ ನೀಡುವ ಉದ್ದೇಶದಿಂದ ಕಡಿಯಾಳಿಯ ಮಹಾಲಸ ದಾಮೋದರ್ ಟವರ್ಸ್‌ನಲ್ಲಿ ಆರಂಭಿಸಿರುವ ಜಿಎಸ್‌ಟಿ ಹೆಲ್ಪ್‌ಡೆಸ್ಕ್‌ನ್ನು ಜೂ.16ರ ಅಪರಾಹ್ನ 12 ಗಂಟೆಗೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆ ನಿರ್ಮಲಾ ಸೀತಾರಾಮ್ ಉದ್ಘಾಟಿಸಲಿದ್ದಾರೆ.
ಈ ಹೆಲ್ಪ್‌ಡೆಸ್ಕ್ ಮೂಲಕ ಜೂ.30ರವರೆಗೆ ವಾರದ ಐದು ದಿನಗಳ ಕಾಲ ಅಪರಾಹ್ನ 3ಗಂಟೆಯಿಂದ 5ಗಂಟೆವರೆಗೆ ಜಿಎಸ್‌ಟಿ ಬಗ್ಗೆ ಜಾಗೃತಿ, ಸಣ್ಣ ಉದ್ದಿಮೆದಾರರಿಗೆ ಜಿಎಸ್‌ಟಿ ಪ್ರಯೋಜನದ ಕುರಿತು ಮಾಹಿತಿ, ಜಿಎಸ್‌ಟಿ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಲಾಗುವುದು.

ಆಸಕ್ತರು ದೂರ ವಾಣಿ(0820-2536603) ಅಥವಾ ಖುದ್ದಾಗಿ ಬಂದು ಮಾಹಿತಿಗಳನ್ನು ಪಡೆದುಕೊಳ್ಳಬಹುದು ಎಂದು ಐಸಿಎಐ ಉಡುಪಿ ಶಾಖೆಯ ಅಧ್ಯಕ್ಷೆ ಸಿಎ ರೇಖಾ ದೇವಾನಂದ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಸಿಎ ನರಸಿಂಹ ನಾಯಕ್, ಕೋಶಾಧಿ ಕಾರಿ ಸಿಎ ಮಹೇಂದ್ರ ಶೆಣೈ, ಗಿರೀಶ್ ಪೈ, ಪ್ರದೀಪ್ ಜೋಗಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News