ತಪ್ಪು ತಿಳುವಳಿಕೆಯಿಂದ ವ್ಯಕ್ತಿಯ ಹತ್ಯೆ: ಒಪ್ಪಿಕೊಂಡ ಸೇನೆ

Update: 2017-06-15 13:10 GMT

ಚಾಂಗ್‌ಲಾಂಗ್, ಜೂ.15: ಭಯೋತ್ಪಾದಕ ಎಂಬ ತಪ್ಪು ತಿಳುವಳಿಕೆಯಿಂದ ಅರುಣಾಚಲಪ್ರದೇಶದ ಚಾಂಗ್‌ಲಾಂಗ್ ಜಿಲ್ಲೆಯಲ್ಲಿ ವ್ಯಕ್ತಿಯೋರ್ವನನ್ನು ಹತ್ಯೆ ಮಾಡಿರುವುದು ನಿಜ ಎಂದು ಸೇನೆ ಒಪ್ಪಿಕೊಂಡಿದೆ.

ಜೂನ್ 14ರ ಮಧ್ಯರಾತ್ರಿ ಭಯೋತ್ಪಾದಕರ ಗುಂಪೊಂದರ ಶಂಕಾಸ್ಪದ ಚಲನವಲನದ ಬಗ್ಗೆ ಗುಪ್ತಚರ ಪಡೆಗಳಿಂದ ದೊರೆತ ಮಾಹಿತಿಯಂತೆ ಸೇನಾ ಪಡೆಯ ತುಕಡಿಯೊಂದು ಕಾರ್ಯಾಚರಣೆಗೆ ಮುಂದಾಯಿತು. ಈ ಸಂದರ್ಭ ಗುಂಪಿನಲ್ಲಿದ್ದ ವ್ಯಕ್ತಿಗಳು ಆಕ್ರಮಣಕ್ಕೆ ಮುಂದಾದಾಗ ಸೇನಾಪಡೆ ಪ್ರತ್ಯುತ್ತರ ನೀಡಿದೆ. ಇದರಿಂದ ಓರ್ವ ವ್ಯಕ್ತಿ ಗಂಭೀರ ಗಾಯಗೊಂಡಿದ್ದು ಬಳಿಕ ಮೃತಪಟ್ಟಿದ್ದಾನೆ. ಮೃತಪಟ್ಟವನನ್ನು ಥಿಂಗ್ಟು ನೆಮು ಎಂದು ಗುರುತಿಸಲಾಗಿದೆ. ಇದು ತಪ್ಪು ಗುರುತಿಸುವಿಕೆಯಿಂದ ಆಗಿರುವ ಪ್ರಮಾದ ಎಂದು ಸೇನಾಪಡೆಯ ಅಧಿಕಾರಿ ತಿಳಿಸಿದ್ದಾರೆ.

ಈ ಮಧ್ಯೆ ಮಣಿಪುರದ ಕಸೊಮ್ ಖುಲೆನ್ ಎಂಬಲ್ಲಿರುವ ಅರೆಸೇನಾಪಡೆಯ ನೆಲೆಯ ಬಳಿ ಸಂಭವಿಸಿದ ಸ್ಫೋಟದಿಂದ ಅಸ್ಸಾಂ ರೈಫಲ್ಸ್ ಪಡೆಯ ಮೂವರು ಯೋಧರು ಗಾಯಗೊಂಡಿರುವುದಾಗಿ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News