ರಾಷ್ಟ್ರಪತಿ ಭೇಟಿ; ಅಂಗಡಿ ಮುಚ್ಚಲು ಸೂಚನೆ
Update: 2017-06-15 20:08 IST
ಉಡುಪಿ, ಜೂ.15: ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಜೂ.18 ರಂದು ಉಡುಪಿ ಜಿಲ್ಲೆಗೆ ಪ್ರಥಮ ಬಾರಿಗೆ ಅಧಿಕೃತ ಕಾರ್ಯಕ್ರಮಕ್ಕಾಗಿ ಭೇಟಿ ನೀಡಲಿದ್ದು, ಶ್ರೀಕೃಷ್ಣಮಠಕ್ಕೆ ಆಗಮಿಸಿ ಕೃಷ್ಣಮಠದಲ್ಲಿ ನಡೆಯುವ ಕಾರ್ಯಕ್ರಮ ದಲ್ಲಿ ಭಾಗವಹಿಸಲಿದ್ದಾರೆ.
ಈ ಸಮಯದಲ್ಲಿ ಗಣ್ಯರ ಭದ್ರತೆಯ ದೃಷ್ಟಿಯಿಂದ ಶ್ರೀಕೃಷ್ಣ ಮಠದ ಸುತ್ತಮುತ್ತ ಇರುವ ಅಂಗಡಿ, ರಥಬೀದಿಯಲ್ಲಿರುವ ಅಂಗಡಿ, ವಿದ್ಯೋದಯ ಶಾಲೆಯ ಬಳಿ ಇರುವ ಅಂಗಡಿಗಳನ್ನು ಹಾಗೂ ಬನ್ನಂಜೆ ಪ್ರವಾಸಿ ಮಂದಿರದ ಆಸುಪಾಸಿನಲ್ಲಿರುವ ಅಂಗಡಿಗಳನ್ನು ಜೂ.17ರಂದು ಇಡೀ ದಿನ ಹಾಗೂ ಜೂ.18ರಂದು ಅಪರಾಹ್ನ 3:00 ಗಂಟೆಯವರೆಗೆ ಮುಚ್ಚಿ ಸಹಕರಿಸುವಂತೆ ಉಡುಪಿ ನಗರಸಭೆಯ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.