"ಪಾಕ್ ನಾಯಕನ ಇಂಗ್ಲಿಷ್ ಚೆನ್ನಾಗಿಲ್ಲ" ಎಂದು ಹೀಯಾಳಿಸಿದವರಿಗೆ ಭಾರತೀಯರು ನೀಡಿದರು ಸೂಕ್ತ ಉತ್ತರ
ಹೊಸದಿಲ್ಲಿ, ಜೂ.15: ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ಪಂದ್ಯ ನಡೆಯುವ ಪ್ರತಿ ಬಾರಿಯೂ ಅಂತರ್ಜಾಲದಲ್ಲಿ ಅಭಿಮಾನಿಗಳು ಪರಸ್ಪರ ತ ಟೀಕೆ, ಹಾಸ್ಯಗಳನ್ನು ಮಾಡುತ್ತಲೇ ಇರುತ್ತಾರೆ. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಜಯಿಸಿದ್ದ ನಂತರದ ಬೆಳವಣಿಗೆಯಲ್ಲಿ ಪಾಕ್ ಕ್ರಿಕೆಟ್ ತಂಡದ ನಾಯಕ ಸರ್ಫ್ರಾಝ್ ಅಹ್ಮದ್ ರನ್ನು ಗೇಲಿ ಮಾಡಿದವರಿಗೆ ಭಾರತೀಯರು ತಿರುಗೇಟು ನೀಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ವೆಬ್ ಸೈಟೊಂದು ಪಾಕ್ ನಾಯಕನ ಇಂಗ್ಲಿಷ್ ಧಾಟಿಯನ್ನು ಗೇಲಿ ಮಾಡಿದ್ದು, ಇದಕ್ಕೆ ಹಲವು ಭಾರತೀಯರು ವಿರೋಧ ವ್ಯಕ್ತಪಡಿಸಿ, ಸರ್ಫ್ರಾಝ್ ರಿಗೆ ಬೆಂಬಲ ಸೂಚಿಸಿದ್ದಾರೆ.
“ಇಂಗ್ಲಿಷ್ ಜಾಣ್ಮೆಯನ್ನು ನಿರ್ಧರಿಸುವುದಿಲ್ಲ” ಎಂದು ಫೇಸ್ಬುಕ್ ಬಳಕೆದಾರರೊಬ್ಬರು ವೆಬ್ ಸೈಟ್ ನ ಸುದ್ದಿಗೆ ಪ್ರತಿಕ್ರಿಯಿಸಿದ್ದಾರೆ. ವೆಬ್ ಸೈಟ್ ಕೂಡಲೇ ತನ್ನ ಫೇಸ್ಬುಕ್ ಪೋಸ್ಟನ್ನು ತೆಗೆದುಹಾಕಿದ್ದರೂ, ಟ್ವಿಟ್ಟರ್ ಬಳಕೆದಾರರೊಬ್ಬರು ಪಾಕಿಸ್ತಾನಿ ನಾಯಕನನ್ನು ಬೆಂಬಲಿಸಿದ ಭಾರತೀಯರನ್ನು ಪ್ರತಿಕ್ರಿಯೆಗಳನ್ನು ಟ್ವೀಟ್ ಮಾಡಿದ್ದಾರೆ.
“ಭಾರತೀಯ ವೆಬ್ ಸೈಟ್ ಪೇಜೊಂದು ಸರ್ಫ್ರಾಝ್ ರ ಇಂಗ್ಲಿಷ್ ಬಗ್ಗೆ ಗೇಲಿ ಮಾಡಿದ್ದು, ಇದಕ್ಕೆ ಭಾರತೀಯರು ಪ್ರತಿಕ್ರಿಯಿಸಿದ ರೀತಿ” ಎಂದು ಟ್ವೀಟ್ ಮಾಡಿರುವ ಅವರು ಭಾರತೀಯರ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.