ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಇಳಿಕೆ

Update: 2017-06-15 15:09 GMT

ಹೊಸದಿಲ್ಲಿ, ಜೂ.15: ಶುಕ್ರವಾರದಿಂದ ದಿನಂಪ್ರತಿ ತೈಲ ಬೆಲೆ ಪರಿಷ್ಕರಣೆಗೊಳ್ಳಲಿದ್ದು, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗಿದೆ. ಪೆಟ್ರೋಲ್ ಲೀಟರೊಂದಕ್ಕೆ 1.12 ರೂ. ಹಾಗೂ ಡೀಸೆಲ್ ಗೆ ಲೀಟರೊಂದಕ್ಕೆ 1.24 ರೂ. ಕಡಿಮೆಯಾಗಿದ್ದು, ಇಂದು ಮಧ್ಯರಾತ್ರಿಯಿಂದ ಜಾರಿಗೆ ಬರಲಿದೆ.

ಶುಕ್ರವಾರದಿಂದ ಜಾಗತಿಕ ತೈಲ ಬೆಲೆಯ ಬದಲಾವಣೆಗೆ ಅನುಗುಣವಾಗಿ ಪ್ರತಿದಿನ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಬದಲಾವಣೆಯಾಗಲಿದೆ. ಪ್ರತಿದಿನ ಬೆಳಗ್ಗೆ 6 ಗಂಟೆಗೆ ತೈಲ ಬೆಲೆ ಪರಿಷ್ಕರಣೆಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News